newsics.com
ನವದೆಹಲಿ: ದೇಶದ ಜನಸಾಮಾನ್ಯರು ಕೊರೋನಾ ಲಸಿಕೆ ಪಡೆಯಲು 2022ರವರೆಗೆ ಕಾಯಲೇಬೇಕು ಎಂದು ಏಮ್ಸ್ʼನ ನಿರ್ದೇಶಕ ಮತ್ತು ಕೋವಿಡ್-19 ನಿರ್ವಹಣೆಯ ರಾಷ್ಟ್ರೀಯ ಕಾರ್ಯಪಡೆ ಸದಸ್ಯ ಡಾ.ರಣದೀಪ್ ಗುಲೇರಿಯಾ ಹೇಳಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜತೆಗೆ ಮಾಸ್ಕ್ ಧರಿಸುವುದರ ಪ್ರಾಮುಖ್ಯತೆ ಬಗ್ಗೆ ಪುನರುಚ್ಚರಿಸಿರುವ ರಣದೀಪ್ ಗುಲೇರಿಯಾ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದ ವ್ಯಕ್ತಿ, ಅತಿ ಹೆಚ್ಚು ಸೋಂಕು ಹರಡುತ್ತಾನೆ ಎಂದಿದ್ದಾರೆ.
ವಿಶೇಷ ಸಂದರ್ಶನವೊಂದರಲ್ಲಿ ಡಾ.ಗುಲೇರಿಯಾ, ಕೊರೊನಾ ವೈರಸ್ ದೇಶದ ವಿವಿಧ ಭಾಗಗಳಲ್ಲಿ ಭಿನ್ನವಾಗಿವೆ. ‘ಮುಂಬೈ ಮತ್ತು ಮಹಾರಾಷ್ಟ್ರದಲ್ಲಿ ಈ ಹಿಂದೆ ಗರಿಷ್ಠ ಮಟ್ಟದಲ್ಲಿದ್ದ ಕೊರೋನಾ ಪ್ರಕರಣಗಳು ಸದ್ಯ ಇಳಿಮುಖವಾಗಿವೆ. ದೆಹಲಿಯ ಮಟ್ಟಿಗೆ ಹೇಳುವುದಾದರೆ, ಕೊರೊನಾ 3ನೇ ಹಂತದಲ್ಲಿದೆ ಎಂದರು.
ಗ್ರಾಮೀಣ ಭಾರತದಲ್ಲಿ ಜನಸಂದಣಿ ಅಷ್ಟೊಂದು ಇಲ್ಲ. ದೈಹಿಕವಾಗಿ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಹಾಗಾಗಿ ಪ್ರಕರಣಗಳ ಸಂಖ್ಯೆ ನಗರ ಪ್ರದೇಶಗಳಂತೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುತ್ತಿಲ್ಲ ಎಂದರು.
ಒಂದೇ ದಿನ ರಾಜ್ಯದಲ್ಲಿ 2258 ಮಂದಿಗೆ ಸೋಂಕು, 22 ಜನ ಬಲಿ
ರಾಜ್ಯದ ಹಲವೆಡೆ ನಾಳೆ, ನಾಡಿದ್ದು ಭಾರೀ ಮಳೆ ಸಾಧ್ಯತೆ
ಬಿಹಾರದಲ್ಲಿ ಕಾಂಗ್ರೆಸ್- ಆರ್’ಜೆಡಿ ಸರ್ಕಾರ; ಇಂಡಿಯಾ ಟುಡೇ ಸಮೀಕ್ಷೆ
2ನೇ ಮಹಾಯುದ್ಧದಲ್ಲಿ ಭಾಗಿಯಾಗಿದ್ದ ಮಾರ್ಕ್ ರೊಡ್ರಿಗಸ್ ಇನ್ನಿಲ್ಲ
ನಾನು ಎಲ್ಲ ಅಮೆರಿಕನ್ನರ ಅಧ್ಯಕ್ಷನಾಗುವೆ: ಬಿಡೆನ್ ಟ್ವೀಟ್
ಅಮೆರಿಕ ಅಧ್ಯಕ್ಷರಾಗಿ ಜೊ ಬಿಡೆನ್ ಆಯ್ಕೆ, ಕಮಲಾ ಹ್ಯಾರಿಸ್ ವೈಸ್ ಪ್ರೆಸಿಡೆಂಟ್