ಕಾರವಾರ: ಕಾರವಾರ ಕಡಲತೀರದಲ್ಲಿ ಸೀಬರ್ಡ್ ಪಕ್ಷಿಗಳ ಕಲರವ ಕಾಣದಂತಾಗಿದೆ.
ಈ ಬಾರಿ ಉಂಟಾಗಿರುವ ಮತ್ಸ್ಯ ಕ್ಷಾಮ ಸೀಬರ್ಡ್ ಪಕ್ಷಿಗಳ ಸಂಖ್ಯೆ ಕಡಿಮೆಯಾಗಲು ಮುಖ್ಯ ಕಾರಣ ಎನ್ನಲಾಗಿದೆ.
ಡಿಸೆಂಬರ್, ಜನವರಿಯಲ್ಲಿ ಸೀಬರ್ಡ್ ಪಕ್ಷಿಗಳು ಕಾರವಾರದ ಕಡಲತೀರಗಳಲ್ಲಿ ತುಂಬಿಕೊಳ್ಳುತ್ತಿದ್ದವು. ರಷ್ಯಾ ಮೂಲದ ಸೀಬರ್ಡ್ ಪಕ್ಷಿಗಳು ಕಾರವಾರದ ಕಡಲತೀರಕ್ಕೆ ಮೆರುಗು ತರುತ್ತಿದ್ದವು.
ಪ್ರತಿ ವರ್ಷ ನವೆಂಬರ್ ತಿಂಗಳಿನಿಂದ ಈ “ಸೀ ಈಗಲ್’ ಎಂದು ಕರೆಯುವ ಸೀಬರ್ಡ್ ಪಕ್ಷಿಗಳು ಹಾಗೂ ಬೆಳ್ಳಕ್ಕಿಗಳು ಕಡಲತೀರಕ್ಕೆ ವಲಸೆ ಬರುತ್ತಿದ್ದವು. ರಷ್ಯಾದಿಂದ ಹಾರಿಬರುವ ಈ ಪಕ್ಷಿಗಳು ಚಳಿಗಾಲದ ಎರಡು ಮೂರು ತಿಂಗಳ ಕಾಲ ಕಾರವಾರದಲ್ಲಿ ಬೀಡುಬಿಟ್ಟು ಮರಿಗಳನ್ನು ಮಾಡಿಕೊಂಡ ಬಳಿಕ ಮತ್ತೆ ತಮ್ಮ ಮೂಲ ಸ್ಥಳಕ್ಕೆ ವಾಪಸ್ ತೆರಳುತ್ತಿದ್ದವು.
ಸಾವಿರ ಸಾವಿರ ಸಂಖ್ಯೆಯಲ್ಲಿ ಕಂಡು ಬರುತ್ತಿದ್ದ ಈ ಸೀಬರ್ಡ್ ಪಕ್ಷಿಗಳನ್ನು ನೋಡಿಯೇ ಕಾರವಾರದ ಅರಗಾ ಗ್ರಾಮದಲ್ಲಿರುವ ಕದಂಬ ನೌಕಾನೆಲೆ ಯೋಜನೆಗೆ ಸೀಬರ್ಡ್ ನೌಕಾನೆಲೆ ಎಂದು ಹೆಸರಿಡಲಾಗಿತ್ತು.
ಮತ್ಸ್ಯ ಕ್ಷಾಮ; ಕಾರವಾರ ಕಡಲತೀರದಲ್ಲಿ ಸೀ ಬರ್ಡ್ ಕ್ಷೀಣ
Follow Us