Saturday, February 27, 2021

ಮಾರ್ಚ್-ಮೇನಲ್ಲೇ ಕರ್ನಾಟಕ ಸೇರಿ ದೇಶವನ್ನು ರೂಪಾಂತರಿ ಕೊರೋನಾ ಕಾಡಿತ್ತು…

newsics.com
ನವದೆಹಲಿ: ಇಂಗ್ಲೆಂಡ್, ದಕ್ಷಿಣ ಆಫ್ರಿಕಾಕ್ಕೂ ಮೊದಲು ಭಾರತದಲ್ಲಿ ‘ರೂಪಾಂತರಿ ಕೊರೋನಾ’ ಕಾಣಿಸಿಕೊಂಡಿತ್ತು ಎಂದು ತಜ್ಞರು ಹೇಳಿದ್ದಾರೆ.
ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾ ಮಾತ್ರವಲ್ಲ, ಕೋವಿಡ್-19 ವೈರಸ್ ನಲ್ಲಿ ರೂಪಾಂತರಕ್ಕೆ ಸಾಕ್ಷಿಯಾದ ನಂತರ ಭಾರತವೂ ಮಾರ್ಚ್’ನಿಂದ ಮೇ ತಿಂಗಳಲ್ಲಿ ಇದೇ ರೀತಿಯ ತೊಂದರೆ ಅನುಭವಿಸಿದೆ ಎಂಬ ಸ್ಪೋಟಕ ಮಾಹಿತಿಯನ್ನು ತಜ್ಞರು ಬಹಿರಂಗಪಡಿಸಿದ್ದಾರೆ.
ಕೊರೋನಾ ವೈರಸ್ ಅನೇಕ ರೂಪಾಂತರಗಳನ್ನು ಕಾಣುತ್ತಿದೆ. ಆದರೆ ಭಾರತ ಕೂಡ ಈ ಬದಲಾವಣೆಗಳನ್ನು ಕಂಡಿದೆ ಎಂದು ಖಾಸಗಿ ಮಾಧ್ಯಮ ‘ದಿ ಪ್ರಿಂಟ್’ ಜತೆ ಮಾತನಾಡಿದ ಇನ್ ಸ್ಟಿಟ್ಯೂಟ್ ಆಫ್ ಜಿನೋಮಿಕ್ಸ್ ಅಂಡ್ ಇಂಟಿಗ್ರೇಟಿವ್ ಬಯಾಲಜಿ (ಐಜಿಐಬಿ) ನಿರ್ದೇಶಕ ಅನುರಾಗ್ ಅಗರವಾಲ್ ಹೇಳಿದ್ದಾರೆ.
ಮಾರ್ಚ್’ನಿಂದ ಮೇವರೆಗೆ, ಅತ್ಯಂತ ಸಾಂಕ್ರಾಮಿಕ ವಾದ ಕೊರೋನಾ ವೈರಸ್ ತಳಿಯನ್ನು ಸಹ ನಾವು ನೋಡಿದ್ದೇವೆ. ಅದು ಈಗ ಯುಕೆಯನ್ನು ಪೀಡಿಸುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ಈ ‘ಸೂಪರ್-ಸ್ಪ್ರೆಡರ್’ ಕೋವಿಡ್ ತಳಿ ತನ್ನಷ್ಟಕ್ಕೆ ತಾನೇ ಸತ್ತು ಹೋಗಬಹುದು ಎಂದೂ ಹೇಳಿದ್ದಾರೆ.
ಈ ವೈರಸ್ ಗೆ ಎ4 ಎಂದು ಹೆಸರಿಸಲಾಗಿದೆ ಎಂದು ಅಗರವಾಲ್ ಮಾಹಿತಿ ನೀಡಿದ್ದಾರೆ. ದೆಹಲಿ, ಹೈದರಾಬಾದ್ ಮತ್ತು ಕರ್ನಾಟಕದಲ್ಲೂ ಇಂತಹ ಪ್ರಕರಣಗಳು ಕಂಡುಬಂದಿವೆ. ಎ 4 ಫಿಟ್ ವೈರಸ್ ಆಗಿರಲಿಲ್ಲ. ಏಕೆಂದರೆ ಅದು ಹೆಚ್ಚು ರೂಪಾಂತರಗೊಂಡಿತ್ತು. ಜೂನ್ ವೇಳೆಗೆ ಅದು ತನ್ನದೇ ಆದ ರೀತಿಯಲ್ಲಿ ನಾಶವಾಯಿತು ಎಂದು ಅವರು ಹೇಳಿದ್ದಾರೆ.

ರಾಜ್ಯದ 14 ಸಚಿವರು, ಶಾಸಕರು, ಅಧಿಕಾರಿ ಸೇರಿ 120 ಮಂದಿ ಮೇಲೆ ಲಸಿಕೆ ಪ್ರಯೋಗ

ಇನ್ನೂ 10 ವರ್ಷ ಕೊರೋನಾ ನಮ್ಮ ಜತೆ ಇರಲಿದೆ- ಬಯೋಟೆಕ್ ಸಿಇಓ

ಅಹಮದಾಬಾದ್​​ನಲ್ಲಿ ಕೊರೋನಾ ಲಸಿಕೆಗಾಗಿ ನೋಂದಣಿ ಆರಂಭ

ಮತ್ತಷ್ಟು ಸುದ್ದಿಗಳು

Latest News

ಸಹೋದರಿಯನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಚೂರಿಯಿಂದ ಇರಿತ

Newsics.com ನವದೆಹಲಿ: ಸಹೋದರಿಗೆ ಕಿರುಕುಳ ನೀಡುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ 17 ವರ್ಷ ಪ್ರಾಯದ ಹುಡುಗನಿಗೆ ದುಷ್ಕರ್ಮಿಗಳು ಚೂರಿಯಿಂದ ಇರಿದಿದ್ದಾರೆ. ಗಂಭೀರ ಹಲ್ಲೆ ನಡೆಸಿದ್ದಾರೆ. ದೆಹಲಿಯ ಕಲ್ಕಾಜಿ ಪ್ರದೇಶದಲ್ಲಿ ಈ ಘಟನೆ...

20 ರೂಪಾಯಿ ದಕ್ಷಿಣೆ ಪಡೆದ ಮುಖ್ಯ ಅರ್ಚಕ ಅಮಾನತು

newsics.com ಕೊಚ್ಚಿ: ಕೇರಳದ ದೇವಸ್ಥಾನವೊಂದರಲ್ಲಿ 20 ರೂಪಾಯಿ ದಕ್ಷಿಣೆ ಪಡೆದ ಮುಖ್ಯ ಅರ್ಚಕರೊಬ್ಬರನ್ನು ಅಮಾನತು ಮಾಡಲಾಗಿದೆ. ದೇವಸ್ಥಾನ ಆಡಳಿತ ಮಂಡಳಿಯ ನೀತಿಗೆ  ವಿರುದ್ದವಾಗಿ ಅರ್ಚಕರು ಹಣ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಕೊಚ್ಚಿ ಸಮೀಪದ ಮಾಚಾಡ್ ತಿರುವಣ್ಣಿಕಾವ್ ದೇವಸ್ಥಾನದಲ್ಲಿ...

ಜಲ್ಲಿಕಟ್ಟು ವೇಳೆ ಅನಾಹುತ: ನಾಲ್ಕು ಮಂದಿ ಸಾವು

newsics.com ಚೆನ್ನೈ: ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸ್ಪರ್ಧೆ ವೇಳೆ ಮತ್ತೊಮ್ಮೆ ದುರಂತ ಸಂಭವಿಸಿದೆ.ಶಿವಗಂಗಾ ಜಿಲ್ಲೆಯ ಅರಲಿಪಾರಯಿ ಗ್ರಾಮದಲ್ಲಿ ಹೋರಿ ಬೆದರಿಸುವ ವೇಳೆ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. 90ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ ಸ್ಥಳೀಯ ದೇವಸ್ಥಾನದ ಉತ್ಸವದ ಅಂಗವಾಗಿ...
- Advertisement -
error: Content is protected !!