ರಸ್ತೆ ದಾಟುತ್ತಿದ್ದ ಹೆಬ್ಬಾವೊಂದನ್ನು ಕಂಡ ಹುಲಿ ಅಚ್ಚರಿ ಹಾಗೂ ಭಯದಿಂದ ಗೊಂದಲಕ್ಕೊಳಗಾಗಿ ನಿಂತು ಗಮನಿಸಿದ ವಿಡಿಯೋವೊಂದು ಮತ್ತೆ ವೈರಲ್ ಆಗಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅರಣ್ಯದೊಳಗಿನ ರಸ್ತೆಯಲ್ಲಿ ಹುಲಿ ನಡೆದು ಹೋಗುತ್ತಿದ್ದಾಗ ಬೃಹತ್ ಹೆಬ್ಬಾವೊಂದು ರಸ್ತೆ ದಾಟುತ್ತಿತ್ತು. ವನ್ಯಪ್ರೇಮಿಯೊಬ್ಬರು ಆಗಸ್ಟ್ 31, 2018 ರಂದು ಚಿತ್ರೀಕರಿಸಿದ್ದ ಈ ಹಳೆಯ ವಿಡಿಯೊ ಇದೀಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಬುಧವಾರ (ಜುಲೈ 22) ಬೆಳಗ್ಗೆ ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಟ್ವಿಟರ್ನಲ್ಲಿ ವಿಡಿಯೊ ಹಂಚಿಕೊಂಡಿದ್ದರಿಂದ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೊವನ್ನು ಕಬಿನಿಯ ಎವಾಲ್ವ್ ಬ್ಯಾಕ್ ರೆಸಾರ್ಟ್ಸ್ನಲ್ಲಿ ಪರಿಸರ ಪ್ರೇಮಿ ಶರತ್ ಅಬ್ರಹಾಂ ಎಂಬುವರು ಚಿತ್ರೀಕರಿಸಿದ್ದಾರೆ. ಹುಲಿಯು ಹಾವಿನ ಸುತ್ತಲೂ ಎಚ್ಚರಿಕೆಯಿಂದ ಹೆಜ್ಜೆ ಹಾಕಿ ಕುತೂಹಲದಿಂದ ನೋಡುವುದನ್ನು ವಿಡಿಯೊದಲ್ಲಿ ಕಾಣಬಹುದು. ನಂತರ ಹುಲಿಯು ರಸ್ತೆಯ ಪಕ್ಕದ ಕೆಲವು ಪೊದೆಗಳತ್ತ ಸರಿದು ಮತ್ತೆ ಹಾವಿನ ಬಳಿಗೆ ಬರುತ್ತದೆ. ಬಳಿಕ ಹೆಬ್ಬಾವು ಹುಲಿಯತ್ತ ಸಮೀಪಿಸಲು ಪ್ರಾರಂಭಿಸಿದಾಗ ಹುಲಿ ಹಾವನ್ನು ಸುತ್ತುವರಿದು ಪೊದೆಯ ಹಿಂದೆ ನಿಂತು ನೋಡಿ ಬಳಿಕ ಹಾವಿನ ಬಗ್ಗೆ ನಿರಾಸಕ್ತಿ ಹೊಂದಿದಂತೆ ಕಂಡು ಮುಂದಕ್ಕೆ ಸಾಗಿದೆ. ‘ಹೆಬ್ಬಾವಿಗೆ ದಾರಿ ಬಿಟ್ಟ ಹುಲಿ’ ಎಂದು ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಟ್ವಿಟರ್ನಲ್ಲಿ ವಿಡಿಯೊ ಶೇರ್ ಮಾಡಿದ್ದಾರೆ.
https://www.instagram.com/tv/B11LkatBU_h/?utm_source=ig_embed
ಹೆಬ್ಬಾವು ಕಂಡ ಹುಲಿಗೆ ಗಾಬರಿ, ಗೊಂದಲ
Follow Us