Thursday, December 9, 2021

ಕೊರೋನಾ ಅಟ್ಟಹಾಸ; ಥಾಯ್ಲೆಂಡ್‌ ನಲ್ಲಿ ಆನೆಗಳಿಗೆ ಆಹಾರವೇ ಇಲ್ಲ!

Follow Us

ಬ್ಯಾಂಕಾಕ್‌: ಕೊರೋನಾದಿಂದ ಥಾಯ್ಲೆಂಡ್‌ ಮೃಗಾಲಯಗಳ ಆನೆಗಳು ತೀವ್ರ ಸಂಕಷ್ಟಕ್ಕೀಡಾಗಿವೆ. ಆನೆಗಳು ಹಸಿವಿನಿಂದ ಬಳಲುತ್ತಿವೆ.
ಥಾಯ್ಲೆಂಡ್‌ ಶಿಬಿರ ಮತ್ತು ಅಭಯಾರಣ್ಯಗಳಲ್ಲಿರುವ 2 ಸಾವಿರಕ್ಕೂ ಹೆಚ್ಚು ಆನೆಗಳು ತೊಂದರೆಯಲ್ಲಿವೆ. ಪ್ರವಾಸಿಗರ ಕೊರತೆ ಮತ್ತು ಸರ್ಕಾರದ ನಿರ್ಬಂಧಗಳಿಂದ ಆನೆ ಶಿಬಿರಗಳು ಮುಚ್ಚುವ ಹಂತ ತಲುಪಿವೆ. ಮೃಗಾಲಯದಲ್ಲಿರುವ ಆನೆಗಳು ಅಪಾಯಕ್ಕೆ ಸಿಲುಕಿವೆ ಎಂದು ಲಂಡನ್‌ ಮೂಲದ ವರ್ಲ್ಡ್ ಅನಿಮಲ್‌ ಪ್ರೊಟೆಕ್ಷನ್‌ (ಡಬ್ಲೂಎಪಿ) ವರದಿ ಹೇಳಿದೆ.
ಥಾಯ್ಲೆಂಡ್‌ನ‌ಲ್ಲಿ ಈಗ ತುಂಬಾ ಬಿಸಿಲು. ಜತೆಗೆ ಆನೆಗಳು ಸಂಚರಿಸುವಷ್ಟು ಪ್ರದೇಶವೂ ಇಲ್ಲ. ಮುಂದಿನ ಆರು ತಿಂಗಳು ಯಾವುದೇ ಆದಾಯವಿರದು ಎಂದು ಆನೆ ಅಭಯಾರಣ್ಯದ ಚಾಂಗ್‌ಚಿಲ್‌ನ ನಿರ್ದೇಶಕ ಸುಪಕಾರ್ನ್ ತನಸೇತ್‌ ತಿಳಿಸಿದ್ದಾರೆ.
ಉತ್ತರ ಥಾಯ್ಲೆಂಡ್‌ನ‌ಲ್ಲಿ ಸುಮಾರು 85ಕ್ಕೂ ಹೆಚ್ಚು ಆನೆ ಶಿಬಿರಗಳು ಬಾಗಿಲು ಮುಚ್ಚಿವೆ. ಕ್ಯಾಂಪ್‌ ಮಾಲೀಕರು ಪ್ರಾಣಿಗಳಿಗೆ ಆಹಾರ ಖರೀದಿಗೆ ಹೆಚ್ಚುವರಿ ಹಣಕ್ಕಾಗಿ ಪರದಾಡುತ್ತಿದ್ದಾರೆ. ಆನೆಯೊಂದಕ್ಕೆ ಪ್ರತಿದಿನ ಸುಮಾರು 300 ಅಥವಾ 400 ಕಿಲೋಗ್ರಾಂಗಳಷ್ಟು (660 ರಿಂದ 880 ಪೌಂಡ್‌) ಆಹಾರ ಅಗತ್ಯವಿದೆ. ಪ್ರತಿ ಆನೆಗೆ ಆಹಾರಕ್ಕಾಗಿ ಸರಾಸರಿ ಮಾಸಿಕ ಖರ್ಚು 10,000 ಟಿಎಚ್‌ಬಿ ಆಗಲಿದೆ ಎಂದು ತನಸೇತ್‌ ಹೇಳಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಹೆಲಿಕಾಪ್ಟರ್ ಪತನದ ಹಿಂದೆ ಚೀನಾ ಕೈವಾಡ: ಸಂಸದ ಸುಬ್ರಮಣಿಯನ್ ಸ್ವಾಮಿ ಶಂಕೆ, ತನಿಖೆಗೆ ಆಗ್ರಹ

newsics.com ನವದೆಹಲಿ: ಸೇನಾ ಹೆಲಿಕಾಪ್ಟರ್ ಪತನದ ಹಿಂದೆ ಚೀನಾ ಕೈವಾಡವಿದೆಯಾ ಎಂಬ ಸಂಶಯವನ್ನು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ವ್ಯಕ್ತಪಡಿಸಿದ್ದಾರೆ. ಇದೊಂದು ಗಂಭೀರ ದುರಂತವಾಗಿದ್ದು, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ...

ಪ್ರಧಾನಮಂತ್ರಿ ಆವಾಜ್ ಯೋಜನೆ 3 ವರ್ಷ ವಿಸ್ತರಣೆ: ಕೇಂದ್ರ ನಿರ್ಧಾರ

newsics.com ನವದೆಹಲಿ: ಮೂರು ವರ್ಷ ಕಾಲ ಪ್ರಧಾನಮಂತ್ರಿ ಆವಾಜ್‌ ಯೋಜನೆ (ಗ್ರಾಮೀಣ) ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ದೇಶದ ಗ್ರಾಮೀಣ ಪ್ರದೇಶದಲ್ಲಿ ಅರ್ಹರಿಗೆ ವಸತಿ ಕಲ್ಪಿಸುವ ಈ ಯೋಜನೆಯನ್ನು ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ಪ್ರಧಾನಿ...

ದೆಹಲಿಯಲ್ಲಿ ಶುಕ್ರವಾರ ರಾವತ್ ದಂಪತಿ ಅಂತ್ಯಕ್ರಿಯೆ, ಉತ್ತರಾಖಂಡದಲ್ಲಿ 3 ದಿನ ಶೋಕಾಚರಣೆ

newsics.com ನವದೆಹಲಿ: ತಮಿಳುನಾಡಿನಲ್ಲಿ ನಡೆದಿರುವ ಸೇನಾ ಹೆಲಿಕಾಪ್ಟರ್ ಪತನದಲ್ಲಿ ನಿಧನರಾಗಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಅವರ ಅಂತ್ಯಕ್ರಿಯೆ ಶುಕ್ರವಾರ(ಡಿ.10) ನಡೆಯಲಿದೆ. ಹೆಲಿಕಾಪ್ಟರ್ ದುರಂತದಲ್ಲಿ ಸಾವಿಗೀಡಾಗಿರುವ ಮೂರು ಸೇನಾ ಪಡೆಗಳ...
- Advertisement -
error: Content is protected !!