Monday, March 8, 2021

ಬ್ರಾಡೀ ಲೀ ಖ್ಯಾತಿಯ ಜಾನ್ ಹ್ಯೂಬರ್ ಇನ್ನಿಲ್ಲ

newsics.com
ಫ್ಲೋರಿಡಾ: ಡಬ್ಲ್ಯೂಡಬ್ಲ್ಯೂಇನಲ್ಲಿ ಲ್ಯೂಕ್ ಹಾರ್ಪರ್ ಮತ್ತು ಆಲ್ ಎಲೈಟ್ ವ್ರೆಸ್ಲಿಂಗ್ ನಲ್ಲಿ ಬ್ರಾಡೀ ಲೀ ಎಂದೇ ಜನಪ್ರಿಯವಾಗಿದ್ದ ಜಾನ್ ಹ್ಯೂಬರ್ (41) ಶ್ವಾಸಕೋಶದ ಸಮಸ್ಯೆಯಿಂದಾಗಿ ಭಾನುವಾರ ಕೊನೆಯುಸಿರೆಳೆದರು.
ಡ್ರ್ಯಾಗನ್ ಗೇಟ್ ಮತ್ತು ಕಾಂಬಾಟ್ ಝೋನ್ ವ್ರೆಸ್ಲಿಂಗ್‌ನಂತಹ ಪ್ರಚಾರಗಳ ಮೂಲಕ ಹ್ಯೂಬರ್ ಕುಸ್ತಿ ಅಖಾಡಕ್ಕೆ ಪ್ರವೇಶಿಸಿದರು. ಅವರು ಅಂತಿಮವಾಗಿ NXT ಮತ್ತು WWE ನಲ್ಲಿ ದೊಡ್ಡ ಸಾಧನೆಗೆ ಮುಂದಾದರು.
ಮೃತ ಜಾನ್ ಹ್ಯೂಬರ್ ಪತ್ನಿ ಅಮಾಂಡಾ ತನ್ನ ಪತಿಯನ್ನು ನೆನೆದು, ‘ನನ್ನ ಉತ್ತಮ ಸ್ನೇಹಿತ ಇಂದು ನಿಧನರಾದರು. ನಾನು ಈ ಪದಗಳನ್ನು ಬರೆಯಲು ಎಂದಿಗೂ ಬಯಸಿರಲಿಲ್ಲ. ಮನಸ್ಸು ಛಿದ್ರವಾಗಿದೆ. ಜಗತ್ತು ಅವನನ್ನು ಅದ್ಭುತ ಬ್ರಾಡೇ ಲೀ’ ಎಂದು ನೋಡಿದೆ. ಆದರೆ ಅವನು ನನ್ನ ಅತ್ಯುತ್ತಮ ಸ್ನೇಹಿತ, ನನ್ನ ಪತಿ ಮತ್ತು ಒಬ್ಬ ಶ್ರೇಷ್ಠ ತಂದೆ ‘ ಎಂದು ಇನ್ಸ್ಟಾಗ್ರಾಂನಲ್ಲಿ ಬರೆದಿದ್ದಾರೆ. ‘ಯಾವುದೇ ಪದಗಳಿಂದಲೂ ನನ್ನ ಪ್ರೀತಿಯನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ ಅಥವಾ ನಾನು ಈಗ ಎಷ್ಟು ದುಃಖಿತಳಾಗಿದ್ದೇನೆ ಎಂದು ಹೇಳಲಾಗದು. ಕೋವಿಡ್ ಅಲ್ಲದ ಶ್ವಾಸಕೋಶದ ಸಮಸ್ಯೆಯೊಂದಿಗೆ ಕಠಿಣ ಹೋರಾಟದ ನಂತರ ಅವರು ಪ್ರೀತಿಪಾತ್ರರಿಂದ ದೂರವಾಗಿದ್ದಾರೆ’ ಅಮಾಂಡಾ ಹೇಳಿದ್ದಾರೆ.

ದೇಶದಲ್ಲಿ ಅತಿ ಕಡಿಮೆ ಕೊರೋನಾ ಕೇಸ್; 24 ಗಂಟೆಯಲ್ಲಿ 18732 ಪ್ರಕರಣ, 279 ಮಂದಿ ಬಲಿ

ಮತ್ತಷ್ಟು ಸುದ್ದಿಗಳು

Latest News

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಸೌತಾಂಪ್ಟನ್ʼಗೆ ಶಿಫ್ಟ್

newsics.com ನವದೆಹಲಿ:‌ ಲಂಡನ್ʼನ ಲಾರ್ಡ್ಸ್ʼನಲ್ಲಿ ನಡೆಯಬೇಕಿದ್ದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಸೌತಾಂಪ್ಟನ್ʼಗೆ ಸ್ಥಳಾಂತರವಾಗಿದೆ.ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ...

ಗುಜರಾತ್, ರಾಜಸ್ಥಾನದ ಮಾಜಿ ರಾಜ್ಯಪಾಲ ಅನ್ಶುಮಾನ್ ಸಿಂಗ್ ನಿಧನ

newsics.com ಲಕ್ನೋ: ರಾಜಸ್ಥಾನ ಮತ್ತು ಗುಜರಾತಿನ ಮಾಜಿ ರಾಜ್ಯಪಾಲ, ರಾಜಸ್ಥಾನ ಹೈಕೋರ್ಟ್ ಮಾಜಿ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅನ್ಶುಮಾನ್ ಸಿಂಗ್ (85) ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸೋಮವಾರ (ಮಾ.8) ಲಕ್ನೋದಲ್ಲಿ ಕೊನೆಯುಸಿರೆಳೆದರು. 1999-2003ರ ನಡುವೆ...

ವೇದಾದ್ಯಯನ ವಿದ್ಯಾರ್ಥಿ ಪಯಸ್ವಿನಿ ನದಿ ಪಾಲು

newsics.com ಸುಳ್ಯ(ದಕ್ಷಿಣ ಕನ್ನಡ): ವೇದಾದ್ಯಯನ ಮಾಡುತ್ತಿದ್ದ ಬಾಲಕನೊಬ್ಬ ಕಾಲುಜಾರಿ ಪಯಸ್ವಿನಿ ನದಿಗೆ ಬಿದ್ದು ಸಾವನಪ್ಪಿದ್ದಾನೆ.ಜಿಲ್ಲೆಯ ಸುಳ್ಯದಲ್ಲಿ ಈ ದುರಂತ ನಡೆದಿದ್ದು, ದರ್ಬೆತ್ತಡ್ಕ ನಿವಾಸಿ ಗೋಪಾಲಕೃಷ್ಣ ಭಟ್ ಅವರ ಪುತ್ರ ಉದನೇಶ್ವರ...
- Advertisement -
error: Content is protected !!