ತಿರುವನಂತಪುರ: ಕೇರಳದಲ್ಲಿ ಮಾರಾಣಾಂತಿಕ ಕೊರೋನಾ ವೈರಸ್ ಮೂರನೆ ಪ್ರಕರಣ ಪತ್ತೆಯಾಗಿದೆ. ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಯೊಬ್ಬನಿಗೆ ಕೊರೋನಾ ವೈರಸ್ ತಗುಲಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ. ಈ ವಿದ್ಯಾರ್ಥಿ ಇತ್ತೀಚೆಗೆ ಚೀನಾದಿಂದ ಕಾಸರಗೋಡಿಗೆ ಹಿಂತಿರುಗಿದ್ದ ಎಂದು ವರದಿಯಾಗಿದೆ. ಕೇಂದ್ರ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಕುರಿತ ಹೆಚ್ಚಿನ ಮಾಹಿತಿ ನೀಡಲು ಕೇರಳ ಸರ್ಕಾರ ನಿರಾಕರಿಸಿದೆ.