Sunday, July 3, 2022

ಇದು ಸ್ಪೆಷಲ್ ಆ್ಯಂಟಿ ಕೊರೋನಾ ಟೀ…!

Follow Us

ವಾರಂಗಲ್: ಕೊರೋನಾಗೆ ಚಿನ್ನದ ಮಾಸ್ಕ್, ವಜ್ರದ ಮಾಸ್ಕ್ ಬಳಿಕ ಇದೀಗ ಕೊರೋನಾಗೆ ಸೆಡ್ಡು ಹೊಡೆಯುವ ಆ್ಯಂಟಿ ಕೊರೋನಾ ಟೀ ಸಿದ್ಧವಾಗಿದೆ. ವಾರಂಗಲ್ ನ ಟೀ ವಾಲಾ ಶಿವ ಇಂತಹದೊಂದು ಟೀ ಸಿದ್ಧಪಡಿಸಿ ಗ್ರಾಹಕರನ್ನು ಸೆಳೆಯುತ್ತಿದ್ದಾರೆ.
ಕೊರೋನಾ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಬಳಸಲಾಗುವ ಈ ಟೀ ತಯಾರಿಕೆಗೆ ಶುಂಠಿ, ಕಾಳುಮೆಣಸು, ದಾಲ್ಚಿನ್ನಿ ಪುಡಿ ಸೇರಿದಂತೆ ವಿವಿಧ ನೈಸರ್ಗಿಕ ಮಸಾಲೆ ಪದಾರ್ಥಗಳನ್ನು ಬಳಸಲಾಗುತ್ತಿದ್ದು, ಇದು ಶ್ವಾಸಕೋಶದ ಆರೋಗ್ಯಕ್ಕೆ ಪೂರಕವಾಗಿದೆ. ಶೀತವನ್ನು ಕಡಿಮೆ ಮಾಡಿ ದೇಹದ ಉಷ್ಣತೆ ಹೆಚ್ಚಿಸುವ ಮೂಲಕ ಆರೋಗ್ಯ ಕಾಪಾಡುತ್ತದೆ ಎಂದು ಟೀ ವಾಲಾ ಶಿವು ಹೇಳಿದ್ದಾರೆ.

ಅಜ್ಜಿಯ ಬದುಕನ್ನೇ ಬದಲಿಸಿತು ‘ಮಾತಾಜಿ ಲಾಠಿ ಸ್ಕಿಲ್’!

ಕೊರೋನಾ ತಡೆಯುವ ಮೊದಲ ಆಯುಧವೇ ರೋಗ ನಿರೋಧಕ ಶಕ್ತಿ. ಇದನ್ನು ಹೆಚ್ಚಿಸಲು ಈ ಟೀ ನೆರವಾಗುತ್ತದೆ. ಹೀಗಾಗಿ ಇಂತಹದೊಂದು ಟೀ ಸಿದ್ಧಪಡಿಸಿದ್ದೇವೆ. ಶಿವು ಸಿದ್ಧಪಡಿಸುತ್ತಿರುವ ಈ ಆರ್ಯುವೇದ ಔಷಧಂತಹ ಟೀಗೆ ಮಾಮೂಲಿ ಚಹಾದಂತೆ ಹಾಲು, ಸಕ್ಕರೆ, ಟೀ ಪುಡಿಯನ್ನು ಹಾಕಲಾಗುತ್ತಿದ್ದು, ಅದರೊಂದಿಗೆ ಈ ಮಸಾಲೆ ಪದಾರ್ಥಗಳನ್ನು ಬೆರೆಸುವ ಮೂಲಕ ಇನ್ನಷ್ಟು ಔಷಧೀಯ ಗುಣ ತರಿಸಲಾಗುತ್ತಿದೆ. ಈ ಚಹಾಕ್ಕೆ ಗ್ರಾಹಕರು ಕೂಡ ಉತ್ತಮ ರೆಸ್ಪಾನ್ಸ್ ನೀಡಿದ್ದಾರೆ. ಕೆಲವರಂತೂ ಪ್ರತಿನಿತ್ಯ ಇಲ್ಲಿಗೆ ಬಂದು ಟೀ ಸೇವಿಸುತ್ತಾರಂತೆ. ಒಟ್ಟಿನಲ್ಲಿ ಇದೀಗ ಕೊರೋನಾ ವಾರಿಯರ್ಸ್ ಸಾಲಿಗೆ ಟೀ ಕೂಡ ಸೇರಿದಂತಾಗಿದೆ.

ಉದ್ಯೋಗ ಪಡೆಯಲು ಕಂಟಕವಾಯ್ತು ಈಕೆಯ ಸರ್ ನೇಮ್…!

ಮತ್ತಷ್ಟು ಸುದ್ದಿಗಳು

vertical

Latest News

ಕಲುಷಿತ ನೀರು ಸೇವನೆ; 40 ಕ್ಕೂ ಹೆಚ್ಚು ಜನ ಅಸ್ವಸ್ಥ

newsics.com ರಾಯಚೂರು; ಕಲುಷಿತ ನೀರು ಸೇವನೆ ಮಾಡಿ 40 ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡ ಘಟನೆ ರಾಯಚೂರಿನಲ್ಲಿ ನಡೆದಿದೆ. ಅನೇಕರು ವಾಂತಿ ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಲ್ಕಂದಿನ್ನಿಯ ಸರ್ಕಾರಿ...

ಅನಾರೋಗ್ಯ ನೆಪವೊಡ್ಡಿ ಏರ್ ಇಂಡಿಯಾ ಸಂದರ್ಶನಕ್ಕೆ ಹಾಜರಾದ ಇಂಡಿಗೋ ಸಿಬ್ಬಂದಿ, ವಿಮಾನ ಸೇವೆ ವ್ಯತ್ಯಯ

newsics.com ನವದೆಹಲಿ: ಏರ್ ಇಂಡಿಗೋ ಸಿಬ್ಬಂದಿ ಅನಾರೋಗ್ಯದ ನೆಪವೊಡ್ಡಿ ಶನಿವಾರ ಏರ್ ಇಂಡಿಯಾ‌ ಸಂದರ್ಶನಕ್ಕೆ ತೆರಳಿದ್ದರಿಂದ ಇಂಡಿಗೋ ಸೇವೆಯಲ್ಲಿ‌ ವ್ಯತ್ಯಯ ಉಂಟಾಗಿತ್ತು. ವಿಮಾನಯಾನ ವ್ಯತ್ಯಯ ಉಂಟಾಗಿದ್ದಕ್ಕೆ ಇಂಡಿಗೋ ಬಳಿ ಕಾರಣ ಕೇಳಲಾಗಿದೆ ಎಂದು ನಾಗರಿಕ ವಿಮಾನಯಾನ...

ಬೆಂಗಳೂರಿನಲ್ಲಿ 746 ಮಂದಿ ಸೇರಿ ರಾಜ್ಯದಲ್ಲಿ 826 ಜನಕ್ಕೆ ಕೊರೋನಾ ಸೋಂಕು

newsics.com ಬೆಂಗಳೂರು ; ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಇಂದು ಒಟ್ಟು 826 ಕೊರೊನಾ ಪ್ರಕರಣ ವರದಿಯಾಗಿದೆ.ಸಕ್ರಿಯ ಪ್ರಕರಣಗಳ ಸಂಖ್ಯೆ 6,666ಕ್ಕೆ ಏರಿಕೆ ಕಂಡಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 39,72,285ಕ್ಕೆ ಏರಿಕೆಯಾಗಿದೆ. ಇಂದು ಯಾವುದೇ ಸಾವು...
- Advertisement -
error: Content is protected !!