Saturday, October 16, 2021

ಜನರಿಂದಲೇ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಆಯ್ಕೆ: ಸಚಿವ ಸುನಿಲ್’ಕುಮಾರ್

Follow Us

newsics.com

ಬೆಂಗಳೂರು: ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಗಳಿಗೆ ಅರ್ಹರನ್ನು ಗುರುತಿಸಿ ಆನ್ಲೈನ್ ಮೂಲಕ ಅವರ ಹೆಸರು ಶಿಫಾರಸು ಮಾಡಲು ಸಾರ್ವಜನಿಕರಿಗೇ ಅವಕಾಶ ಕಲ್ಪಿಸಲಾಗಿದೆ.

ಈ ಬಗ್ಗೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ.

ಈ ವರ್ಷ 66 ಅರ್ಹ ಸಾಧಕರನ್ನು ಗುರುತಿಸಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುವುದು. ಸಾರ್ವಜನಿಕರು ಸೇವಾ ಸಿಂಧು ಪೋರ್ಟಲ್ ಮೂಲಕ ರಾಜ್ಯೋತ್ಸವ ಪ್ರಶಸ್ತಿಗಾಗಿ ಸಿದ್ಧಪಡಿಸಲಾಗಿರುವ ವಿಶೇಷ ನಮೂನೆಯ ಅರ್ಜಿಯಲ್ಲಿ ಮೂರು ಹೆಸರುಗಳನ್ನು ಅಕ್ಟೋಬರ್ 15ರೊಳಗೆ ಶಿಫಾರಸು ಮಾಡಬಹುದಾಗಿದೆ.

ಕ್ರೀಡೆ ಹೊರತುಪಡಿಸಿದರೆ ಉಳಿದ ಸಾಧಕರು ಕನಿಷ್ಠ 60 ವರ್ಷ ಮೇಲ್ಪಟ್ಟವರಾಗಿರಬೇಕು ಎಂದು ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.

ಇಂತಹ ವಿಶಿಷ್ಟ ಪ್ರಯೋಗವನ್ಜು ಇದೇ ಮೊದಲ ಬಾರಿಗೆ ಮಾಡಲಾಗುತ್ತಿದ್ದು, ಇದು ಅತ್ಯಂತ ಪಾರದರ್ಶಕ ಹಾಗೂ ಪ್ರಜಾಪ್ರಭುತ್ವ ಸಿದ್ಧಾಂತಗಳಿಗೆ ಅನುಗುಣವಾಗಿ ನಡೆಯುತ್ತಿರುವುದು ವಿಶೇಷವಾಗಿದೆ ಎಂದು ಅವರು ಹೇಳಿದ್ದಾರೆ.

ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕವೂ ಸೇವಾ ಸಿಂಧು ಪೋರ್ಟಲ್ ನಲ್ಲಿ ಶಿಫಾರಸು ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.

ವಿದ್ಯಾರ್ಥಿಯಾಗಿದ್ದಾಗ ಟೀ ಮಾರುತ್ತಿದ್ದ ಬಾರಾಮತಿಯ ಬಾಲಕ ಈಗ ಐಪಿಎಸ್ ಅಧಿಕಾರಿ!

ಥ್ರೋ ಬ್ಯಾಕ್ ಫೋಟೋ ಹಂಚಿಕೊಂಡ ದಿಶಾ ಪಟಾಣಿ

ಸೆಲ್ಫಿ ವಿಡಿಯೋ ಗೀಳು: ಕುಡಿದ ಅಮಲಿನಲ್ಲಿ ಜಲಾಶಯದ ಹಿನ್ನೀರಿಗೆ ಬಿದ್ದು ಟೆಕ್ಕಿ ಸಾವು

ಮತ್ತಷ್ಟು ಸುದ್ದಿಗಳು

Latest News

ಲಸಿಕೆ ನೀಡಲು ಅಪಾಯಕಾರಿ ಬಿದಿರಿನ ಸೇತುವೆ ದಾಟಿದ ಆರೋಗ್ಯ ಕಾರ್ಯಕರ್ತ: ವಿಡಿಯೋ ವೈರಲ್

newsics.com ಅರುಣಾಚಲ ಪ್ರದೇಶ: ಇಲ್ಲಿನ ಆರೋಗ್ಯ ಕಾರ್ಯಕರ್ತರೊಬ್ಬರು ಜನರಿಗೆ ಕೋವಿಡ್ -19 ವಿರುದ್ಧ ಲಸಿಕೆ ನೀಡಲು ಬಿದಿರಿನ ಸೇತುವೆ ದಾಟಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅವರು...

ಕಾಂಗ್ರೆಸ್‌ ನಾಯಕನ ಕೊಲೆ: ಪತ್ನಿಯ ಸ್ಥಿತಿ ಗಂಭೀರ

newsics.com ಜಾರ್ಖಂಡ್‌: ಕಾಂಗ್ರೆಸ್ ನಾಯಕನನ್ನು ದುಷ್ಕರ್ಮಿಗಳ ತಂಡ ಹೊಡೆದು ಕೊಂದಿರುವ ಘಟನೆ ಜಾರ್ಖಂಡ್‌ ನ ರಾಮ್ ಗಢದಲ್ಲಿ ನಡೆದಿದೆ. ರಾಮ್ ಗಢ ಜಿಲ್ಲಾ ಕಾಂಗ್ರೆಸ್‌ ನ ಮಾಜಿ ಪ್ರಧಾನ ಕಾರ್ಯದರ್ಶಿ ಕಮಲೇಶ್‌ ನಾರಾಯಣ ಶರ್ಮಾ...

ಕೇರಳದಲ್ಲಿ ಭಾರೀ ಮಳೆಗೆ 3 ಸಾವು: 5 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ

newsics.com ಕೇರಳ: ಕೇರಳದಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವರು ಪ್ರದೇಶಗಳಲ್ಲಿ ನದಿಗಳು ಉಕ್ಕಿ ಹರಿಯುತ್ತಿವೆ. 3 ಮಂದಿ ಸಾವನ್ನಪ್ಪಿದ್ದು, ಹಲವಾರು ನಾಪತ್ತೆಯಾಗಿದ್ದಾರೆ. ಭಾರತ ಹವಾಮಾನ ಇಲಾಖೆ ಪತ್ತನಂತಿಟ್ಟ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ರೆಡ್...
- Advertisement -
error: Content is protected !!