ಕಲಬುರಗಿ: ಕೆಂಡದ ನೆಲದಲ್ಲಿ ಈಗ ಸಾಹಿತ್ಯದ ಘಮ ಘಮ… ಅಮೋಘವರ್ಷನ ನಾಡಲ್ಲಿ ಕನ್ನಡದ ಕಹಳೆ… ಎಲ್ಲಿ ನೋಡಿದರೂ ಹಳದಿ ಕೆಂಪಿನ ಕನ್ನಡ ಬಾವುಟ… ಕನ್ನಡದ ಶಾಲು ಹೊದ್ದ ಕನ್ನಡಾಭಿಮಾನಿಗಳು…
ಹೌದು, ಇಂದಿನಿಂದ ಮೂರು ದಿನ ನಡೆಯುವ ಕನ್ನಡ ಹಬ್ಬದ ನೋಟವಿದು. ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂಭ್ರಮಕ್ಕೆ ಗುಲ್ಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಕವಿ ಡಾ.ಎಚ್.ಎಸ್ ವೆಂಕಟೇಶ ಮೂರ್ತಿ ಚಾಲನೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ. ಮನು ಬಳಿಗಾರ ಕಸಾಪ ಧ್ವಜಾರೋಹಣ ಮಾಡಿದರೆ, ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ನಾಡ ಧ್ವಜಾರೋಹಣ ನೆರವೇರಿಸಿದರು. ಸಂಸದ ಡಾ. ಉಮೇಶ್ ಜಾಧವ್ ಉಪಸ್ಥಿತರಿದ್ದರು.
ಡಾ.ಎಸ್.ಎಂ ಪಂಡಿತ ರಂಗಮಂದಿರದಿಂದ ಸಮ್ಮೇಳನದ ಭವ್ಯ ಮೆರವಣಿಗೆ ಆರಂಭಗೊಂಡಿತು. ಮೆರವಣಿಗೆಯನ್ನು ಜಿಲ್ಲಾಧಿಕಾರಿ ಶರತ್ ಬಿ. ಉದ್ಘಾಟಿಸಿದರು. ಮೆರವಣಿಗೆಯಲ್ಲಿ ಸುಮಾರು ನಲ್ವತ್ತಕ್ಕೂ ಹೆಚ್ಚು ವಿವಿಧ ಕಾಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯ ಮೂಲಕ ಸಮ್ಮೇಳನಕ್ಕೆ ಮೋಹಕ ರಂಗು ನೀಡಿದರು.
ಏಳು ಸಾವಿರಕ್ಕೂ ಹೆಚ್ಚು ಸಾಹಿತ್ಯ ಪ್ರಿಯರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.
ಕಲಬುರಗಿಯಲ್ಲಿ ಕನ್ನಡ ಕಲರವ; ಮೂರು ದಿನಗಳ ಸಾಹಿತ್ಯ ಸಮ್ಮೇಳನ ಶುರು
Follow Us