ಮುಂಬೈ: ಮಹಾರಾಷ್ಟ್ರದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ ಶನಿವಾರ 3 ಲಕ್ಷ ದಾಟಿದೆ. ವಾಣಿಜ್ಯ ನಗರಿ ಮುಂಬೈವೊಂದರಲ್ಲೇ 1 ಲಕ್ಷ ಸೋಂಕು ಪ್ರಕರಣ ಪತ್ತೆಯಾಗಿದೆ.
ಮಹಾರಾಷ್ಟ್ರದಲ್ಲಿ ಶನಿವಾರ 8348 ಹೊಸ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 3,00,937ಕ್ಕೆ ಏರಿಕೆಯಾಗಿದೆ. 114 ಮಂದಿ ಒಂದೇ ದಿನ ಬಲಿಯಾಗಿದ್ದು, ಇದರಿಂದ ಒಟ್ಟೂ ಸಾವಿನ ಸಂಖ್ಯೆ 11,596ಕ್ಕೆ ಏರಿಕೆಯಾಗಿದೆ. ಮುಂಬೈನಲ್ಲಿ ಶನಿವಾರ 56 ಮಂದಿ ಅಸುನೀಗಿದ್ದಾರೆ.
ಮಹಾರಾಷ್ಟ್ರದಲ್ಲಿ ಪ್ರಸ್ತುತ 1,26,926 ಸಕ್ರಿಯ ಪ್ರಕರಣಗಳಿದ್ದು, 1,65,665 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲೇ ಅತೀ ಹೆಚ್ಚು ಕೊರೋನಾಪೀಡಿತ ರಾಜ್ಯ ಮತ್ತು ನಗರವಾಗಿರುವ ಮಹಾರಾಷ್ಟ್ರ ಮತ್ತು ಮುಂಬೈನಲ್ಲಿ ಲಾಕ್ ಡೌನ್ ಸೇರಿ ಹಲವು ಕ್ರಮ ಕೈಗೊಂಡಿದ್ದರೂ ಕೊರೋನಾ ಹರಡುವಿಕೆ ಮಾತ್ರ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ.
ಮಹಾರಾಷ್ಟ್ರದಲ್ಲೀಗ 3 ಲಕ್ಷ ಸೋಂಕಿತರು, ಮುಂಬೈನಲ್ಲೇ 1 ಲಕ್ಷ ಮಂದಿಗೆ ಕೊರೋನಾ
Follow Us