Monday, March 8, 2021

ಇಂದು, ನಾಳೆ 4 ರಾಜ್ಯಗಳಲ್ಲಿ ಕೊರೋನಾ ಲಸಿಕೆ ನೀಡಿಕೆ ಅಣಕು ಅಭಿಯಾನ

newsics.com
ನವದೆಹಲಿ: ದೇಶದಾದ್ಯಂತ ಜನವರಿಯಲ್ಲಿ ಜನರಿಗೆ ಕೊರೋನಾ ಲಸಿಕೆ ನೀಡುವ ಅಭಿಯಾನ ಚಾಲನೆಗೆ ಮುಂದಾಗಿರುವ ಕೇಂದ್ರ ಸರ್ಕಾರ, ಪೂರ್ವಭಾವಿಯಾಗಿ ನಾಲ್ಕು ರಾಜ್ಯಗಳಲ್ಲಿ ಸೋಮವಾರ ಮತ್ತು ಮಂಗಳವಾರ 2 ದಿನ ಲಸಿಕೆ ನೀಡಿಕೆಯ ಅಣಕು ಕಾರ್ಯಾಚರಣೆ ನಡೆಸಲಿದೆ.
ಪಂಜಾಬ್, ಅಸ್ಸಾಂ, ಆಂಧ್ರಪ್ರದೇಶ ಮತ್ತು ಗುಜರಾತ್ ರಾಜ್ಯಗಳ ತಲಾ 2 ಜಿಲ್ಲೆಗಳಲ್ಲಿ 2 ದಿನಗಳ ಲಸಿಕೆ ನೀಡಿಕೆಯ ಅಣಕು ಕಾರ್ಯಾಚರಣೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊರೋನಾ ಲಸಿಕೆ ಅಭಿಯಾನಕ್ಕೆ ಅಗತ್ಯವಿರುವ ಕ್ರಮಗಳಾದ ಕೋ-ವಿನ್ ಆಪ್’ನಲ್ಲಿ ಲಸಿಕೆ ಫಲಾನುಭವಿಗಳ ಹೆಸರು ನೋಂದಣಿ, ಲಸಿಕೆ ಸಾಗಣೆಯ ಆನ್’ಲೈನ್ ಮೇಲ್ವಿಚಾರಣೆ, ಲಸಿಕೆ ಪಡೆಯುವವರ ಆಯ್ಕೆ, ಲಸಿಕೆ ಕೇಂದ್ರಗಳಲ್ಲಿ ಫಲಾನುಭವಿಗಳಿಗೆ ಅಣಕು ಲಸಿಕೆ ಹಾಕುವುದು ಸೇರಿದಂತೆ ಇನ್ನಿತರ ಪ್ರಕ್ರಿಯೆಗಳನ್ನು ಆ ಅಣಕು ಕಾರ್ಯಾಚರಣೆ ಒಳಗೊಂಡಿರಲಿದೆ.
ಇಂಗ್ಲೆಂಡ್​ನಲ್ಲಿ ಈಗಾಗಲೇ ಕೊರೊನಾ ವೈರಸ್ ವಿರುದ್ಧದ ಲಸಿಕೆ ನೀಡಿಕೆ ಆರಂಭವಾಗಿದೆ. ಅಮೆರಿಕದಲ್ಲಿ ಹತ್ತು ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. ಫೈಝರ್, ಮಾಡೆರ್ನಾ ಕಂಪನಿಯ ಲಸಿಕೆಗಳನ್ನ ಅಮೆರಿಕ, ಇಂಗ್ಲೆಂಡ್ ಜನರ ಬಳಕೆಗೆ ಅನುಮೋದಿಸಲಾಗಿದೆ. ಭಾರತದಲ್ಲಿ ಇನ್ನೂ ಯಾವುದೇ ಕಂಪನಿಯ ಲಸಿಕೆಯನ್ನು ಜನರ ತುರ್ತು ಬಳಕೆಗೆ ಅನುಮೋದಿಸಿಲ್ಲ.

ಇಂದು ದೇಶದ ಮೊದಲ ಚಾಲಕ ರಹಿತ ರೈಲು ಸೇವೆಗೆ ಪ್ರಧಾನಿ ಚಾಲನೆ

1.2ಕೋಟಿ ಮೌಲ್ಯದ ಹೆರಾಯಿನ್ ವಶ: ಓರ್ವನ ಬಂಧನ

ವಿದೇಶ ಪ್ರವಾಸಕ್ಕೆ ತೆರಳಿದ ರಾಹುಲ್ ಗಾಂಧಿ

250ರೂ. ಊಟಕ್ಕೆ 50 ಸಾವಿರ ರೂ.ಕಳೆದುಕೊಂಡ ಮಹಿಳೆ

ಮತ್ತಷ್ಟು ಸುದ್ದಿಗಳು

Latest News

2ನೇ‌ ಮಗುವಿನ ಲಿಂಗದ ಬಗ್ಗೆ ‌ಹೇಳಿಕೊಂಡ ಇಂಗ್ಲೆಂಡ್ ರಾಜ-ರಾಣಿ

newsics.com ಕ್ಯಾಲಿಫೋರ್ನಿಯಾ: ರಾಜಮನೆತನದಿಂದ ಹೊರಬಂದು ಜನಸಾಮಾನ್ಯರಂತೆ ವಾಸಿಸುತ್ತಿರುವ ಇಂಗ್ಲೆಂಡ್​​​ನ​​​ ಯುವರಾಜ ಹ್ಯಾರಿ ಮತ್ತು ಯುವರಾಣಿ ಮೇಘನ್ ಸಂದರ್ಶನದಲ್ಲಿ ಇನ್ನು ಗರ್ಭದಲ್ಲಿರುವ ಎರಡನೇ ಮಗುವಿನ ಲಿಂಗವನ್ನು ಬಹಿರಂಗಪಡಿಸಿದ್ದಾರೆ. ಅಮೆರಿಕದ ಸಂದರ್ಶಕಿ...

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಸೌತಾಂಪ್ಟನ್ʼಗೆ ಶಿಫ್ಟ್

newsics.com ನವದೆಹಲಿ:‌ ಲಂಡನ್ʼನ ಲಾರ್ಡ್ಸ್ʼನಲ್ಲಿ ನಡೆಯಬೇಕಿದ್ದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಸೌತಾಂಪ್ಟನ್ʼಗೆ ಸ್ಥಳಾಂತರವಾಗಿದೆ.ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸೋಮವಾರ (ಮಾ.8) ಈ ಮಾಹಿತಿ ನೀಡಿದ್ದಾರೆ....

ಗುಜರಾತ್, ರಾಜಸ್ಥಾನದ ಮಾಜಿ ರಾಜ್ಯಪಾಲ ಅನ್ಶುಮಾನ್ ಸಿಂಗ್ ನಿಧನ

newsics.com ಲಕ್ನೋ: ರಾಜಸ್ಥಾನ ಮತ್ತು ಗುಜರಾತಿನ ಮಾಜಿ ರಾಜ್ಯಪಾಲ, ರಾಜಸ್ಥಾನ ಹೈಕೋರ್ಟ್ ಮಾಜಿ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅನ್ಶುಮಾನ್ ಸಿಂಗ್ (85) ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸೋಮವಾರ (ಮಾ.8) ಲಕ್ನೋದಲ್ಲಿ ಕೊನೆಯುಸಿರೆಳೆದರು. 1999-2003ರ ನಡುವೆ...
- Advertisement -
error: Content is protected !!