Monday, April 12, 2021

ಇಸ್ಲಾಮಾಬಾದ್ ನಲ್ಲಿ ಭಾರತದ ರಾಯಭಾರ ಕಚೇರಿಯ ಇಬ್ಬರು ಅಧಿಕಾರಿಗಳು ನಾಪತ್ತೆ

ಇಸ್ಲಾಮಾಬಾದ್: ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ಭಾರತದ ಇಬ್ಬರು ರಾಜತಾಂತ್ರಿಕರು ನಾಪತ್ತೆಯಾಗಿದ್ದಾರೆ. ಕಳೆದ ಮೂರು ಗಂಟೆಗಳಿಂದ ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಅಧಿಕಾರಿಗಳನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ತನ್ನ ವಶಕ್ಕೆ ತೆಗೆದುಕೊಂಡಿರ ಬಹುದು ಎಂದು ಶಂಕಿಸಲಾಗಿದೆ. ಎರಡು ವಾರಗಳ ಹಿಂದೆ ಗೂಢ ಚರ್ಯೆ ಆರೋಪದ ಹಿನ್ನೆಲೆಯಲ್ಲಿ ಪಾಕಿಸ್ತಾನದ ನವದೆಹಲಿ ರಾಯಭಾರಿ ಕಚೇರಿಯಲ್ಲಿದ್ದ ಇಬ್ಬರು ಅಧಿಕಾರಿಗಳನ್ನು ಭಾರತ ಉಚ್ಚಾಟನೆ ಮಾಡಿತ್ತು. ಇದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನ ಈ ನಾಟಕ ಮಾಡಿದೆ ಎಂದು ಶಂಕಿಸಲಾಗಿದೆ.  ತನ್ನ ರಾಜತಾಂತ್ರಿಕ ಅಧಿಕಾರಿಗಳ ಚಲನ ವಲನದ ಮೇಲೆ  ಪಾಕಿಸ್ತಾನ ಕಣ್ಗಾವಲು ಇರಿಸಿದೆ ಎಂದು ಭಾರತ ಕಳೆದ ವಾರ ಆರೋಪಿಸಿತ್ತು. ಇದನ್ನು ಪಾಕಿಸ್ತಾನ  ನಿರಾಕರಿಸಿತ್ತು.

ಮತ್ತಷ್ಟು ಸುದ್ದಿಗಳು

Latest News

4 ಕೋಟಿ ರೂಪಾಯಿ ಹಣದೊಂದಿಗೆ ಪರಾರಿಯಾದ ಸೆಕ್ಯೂರಿಟಿ ಗಾರ್ಡ್

newsics.com ಚಂಢೀಗಢ: ಪಂಜಾಬಿನ ಚಂಢೀಗಢದಲ್ಲಿ ಬ್ಯಾಂಕ್ ಭದ್ರತಾ ಸಿಬ್ಬಂದಿಯೊಬ್ಬರು 4 ಕೋಟಿ 4 ಲಕ್ಷ ರೂಪಾಯಿ ಜತೆ ಪರಾರಿಯಾಗಿದ್ದಾರೆ. ಸೆಕ್ಟರ್ 34 ಎ ಯಲ್ಲಿ ಈ ಪ್ರಕರಣ...

ಅಪ್ರಾಪ್ತ ಬಾಲಕಿಗೆ ಚುಂಬನ: ಯುವಕನಿಗೆ ಒಂದು ವರ್ಷ ಜೈಲು

newsics.comಮುಂಬೈ: ಅಪ್ರಾಪ್ತ ಬಾಲಕಿಗೆ ಕಣ್ಣು ಹೊಡೆದಿದ್ದಲ್ಲದೆ ಚುಂಬಿಸಿದ್ದಕ್ಕಾಗಿ 20 ವರ್ಷದ ಯುವಕನಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ  ಮುಂಬೈ ವಿಶೇಷ ನ್ಯಾಯಾಲಯ...

ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ ಆತ್ಮಹತ್ಯೆ

newsics.comಬೆಂಗಳೂರು: ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ(41) ಆತ್ಮಹತ್ಯೆಗೆ ಶರಣಾಗಿದ್ದಾರೆ.ತಾಯಿಯ ಸಾವು, ಮಕ್ಕಳಿಲ್ಲವೆಂಬ, ಉದ್ಯೋಗವಿರಲಿಲ್ಲವೆಂಬ ಆತಂಕದಿಂದ ಮಾನಸಿಕ‌ ಖಿನ್ನತೆಗೊಳಗಾಗಿದ್ದ ಶಿಲ್ಪಾ ಡೆತ್ ನೋಟ್ ಬರೆದಿಟ್ಟು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ...
- Advertisement -
error: Content is protected !!