ಟೆಹರಾನ್: ಉಕ್ರೇನ್ ವಿಮಾನವೊಂದು ಟೆಹರಾನ್ ನಲ್ಲಿರುವ ಇಮಾಂ ಖೊಮೇನಿ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ. ಉಕ್ರೇನ್ ನ ಬೋಯಿಂಗ್ 737 ವಿಮಾನ ದಲ್ಲಿ 180 ಪ್ರಯಾಣಿಕರಿದ್ದರು. ಈ ನತದೃಷ್ಟ ವಿಮಾನ ಟೆಹರಾನ್ ನಿಂದ ಉಕ್ರೇನ್ ರಾಜಧಾನಿ ಕೈವ್ ಗೆ ಪ್ರಯಾಣ ಬೆಳೆಸುತ್ತಿತ್ತು. ತಾಂತ್ರಿಕ ದೋಷದಿಂದ ಈ ದುರಂತ ಸಂಭವಿಸಿದೆ ಎಂದು ಇರಾನ್ ಹೇಳಿದೆ. ಅಮೆರಿಕದ ಸೇನೆ ನೆಲೆಯ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ಈ ದುರಂತ ಸಂಭವಿಸಿರುವುದು ಹಲವು ಸಂಶಯಗಳನ್ನು ಹುಟ್ಟು ಹಾಕಿದೆ.