Wednesday, February 1, 2023

ಪಾಕ್ ಗೆ ಮಿಲಿಟರಿ ತರಬೇತಿ ನೀಡಲು ಅಮೆರಿಕ ಒಪ್ಪಿಗೆ

Follow Us

ವಾಷಿಂಗ್ಟನ್: ತನ್ನ ಸಂಸ್ಥೆಗಳಲ್ಲಿ ಪಾಕ್ ಭದ್ರತಾ ಸಿಬ್ಬಂದಿಗೆ ಮಿಲಿಟರಿ ತರಬೇತಿ ನೀಡಲು ಅಮೆರಿಕ ಸರ್ಕಾರ ಅನುಮೋದನೆ ನೀಡಿದೆ ಎಂದು ಅಮೆರಿಕದ ಉನ್ನತ ನಿಯೋಗ ತಿಳಿಸಿದೆ.
ಈ ತರಬೇತಿ ಮೂಲಕ ಎರಡೂ ದೇಶಗಳ ಮಿಲಿಟರಿ ಸಹಕಾರ ಬಲವರ್ಧನೆಯಾಗಲಿದೆ. ರಷ್ಯಾದ ರಕ್ಷಣಾ ಕೇಂದ್ರಗಳಲ್ಲಿ ಪಾಕಿಸ್ತಾನ ಪಡೆ ತರಬೇತಿ ಪಡೆಯಬಹುದು ಎಂದು ಪಾಕಿಸ್ತಾನ ಮತ್ತು ರಷ್ಯಾ ಸಹಿ ಮಾಡಿದ ನಂತರ ಅಮೆರಿಕ ರದ್ದುಪಡಿಸಿತ್ತು. 2018ರ ಆಗಸ್ಟ್ ತಿಂಗಳಲ್ಲಿ ಅಮೆರಿಕಾದ ಟ್ರಂಪ್ ಸರ್ಕಾರ ಪಾಕಿಸ್ತಾನಕ್ಕೆ ನೀಡಿದ್ದ ದಶಕಗಳಿಗೂ ಹೆಚ್ಚಿನ ಸಮಯದ ಅಂತಾರಾಷ್ಟ್ರೀಯ ಮಿಲಿಟರಿ ಶಿಕ್ಷಣ ಮತ್ತು ತರಬೇತಿ ಕಾರ್ಯಕ್ರಮವನ್ನು ರದ್ದುಪಡಿಸಿತ್ತು.
ಅಮೆರಿಕ ಕಾರ್ಯದರ್ಶಿ ಮೈಕ್ ಪೊಂಪಿಯೊ ಪಾಕಿಸ್ತಾನ ಸೇನಾ ಮುಖ್ಯಸ್ಥ ಖಮರ್ ಜಾವೆದ್ ಬಾಜ್ವಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ನಂತರ ಪಾಕಿಸ್ತಾನಕ್ಕೆ ಐಎಂಇಟಿ ಅಧ್ಯಕ್ಷ ಅಲಿಸ್ ಜಿ ವೆಲ್ಸ್ ಟ್ವೀಟ್ ಮಾಡಿದ್ದಾರೆ.
ಆದರೆ ಪಾಕಿಸ್ತಾನಕ್ಕೆ ಒಟ್ಟಾರೆ ಭದ್ರತಾ ನೆರವು ರದ್ದುಪಡಿಸುವ ನಿರ್ಧಾರ ಮುಂದುವರಿಯಲಿದೆ ಎಂದು ನಿಯೋಗ ತಿಳಿಸಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಬಾಂಬೆ ಸಿಸ್ಟರ್ಸ್ ಖ್ಯಾತಿಯ ವಿದುಷಿ ಸಿ. ಲಲಿತ ಇನ್ನಿಲ್ಲ

newsics.com ಮುಂಬೈ: ಸುಶ್ರಾವ್ಯ ಕರ್ನಾಟಕ ಸಂಗೀತಕ್ಕೆ ಹೆಸರಾದ ಬಾಂಬೆ ಸಹೋದರಿಯರು ಖ್ಯಾತಿಯ ಸಿ. ಸರೋಜಾ - ಸಿ. ಲಲಿತಾ ಜೋಡಿಯಲ್ಲಿ ಕಿರಿಯರಾದ ಸಿ. ಲಲಿತಾ (85) ಮಂಗಳವಾರ...

ಕಾನೂನು ತಜ್ಞ, ಮಾಜಿ ಸಚಿವ ಶಾಂತಿ ಭೂಷಣ್ ನಿಧನ

newsics.com ನವದೆಹಲಿ: ಹಿರಿಯ ವಕೀಲ ಹಾಗೂ ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ (97) ಮಂಗಳವಾರ ನಿಧನರಾದರು. ಇಂದು ಸಂಜೆ...

ಕನ್ಹಾ ಅಭಯಾರಣ್ಯದಲ್ಲಿ 5 ಮರಿಗಳಿಗೆ ಜನ್ಮ ನೀಡಿದ ಹುಲಿ

Newsics.Com ಮಧ್ಯಪ್ರದೇಶ: ಕನ್ಹಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಕೆಟಿಆರ್‌) ಹುಲಿಯೊಂದು ಐದು ಮರಿಗಳಿಗೆ ಜನ್ಮ ನೀಡಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
- Advertisement -
error: Content is protected !!