Saturday, November 27, 2021

ಆಕ್ಸ್ ಫರ್ಡ್ ವಿವಿಯಿಂದ ಸೆಪ್ಟೆಂಬರ್ ಹೊತ್ತಿಗೆ ಕೊರೋನಾಗೆ ಲಸಿಕೆ ಸಾಧ್ಯತೆ

Follow Us

♦ ಆಕ್ಸ್ ಫರ್ಡ್ ವಿವಿಗೆ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಾಥ್

ಬ್ರಿಟನ್: ಕೊರೋನಾಗೆ ಲಸಿಕೆ ಕಂಡುಹಿಡಿಯಲು ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಶತಪ್ರಯತ್ನ ನಡೆಸಿದೆ. ಇದಕ್ಕಾಗಿ ಯು.ಕೆ ಸರ್ಕಾರ 20 ಮಿಲಿಯನ್ ಪೌಂಡ್ ಆರ್ಥಿಕ ಸಹಾಯ ಒದಗಿಸಿದೆ.
ಎಲ್ಲವೂ ಅಂದುಕೊಂಡಂತೆ ಆದರೆ ಸೆಪ್ಟೆಂಬರ್ ನಲ್ಲಿ ಲಸಿಕೆ ಮಾರುಕಟ್ಟೆಗೆ ಲಭ್ಯವಾಗಲಿದೆ ಎಂದು ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮೂಲಗಳು ತಿಳಿಸಿವೆ.
ಯು.ಕೆ.ನಲ್ಲಿ ಕಳೆದ ಗುರುವಾರವಷ್ಟೇ ಮನುಷ್ಯರ ಮೇಲೆ ಲಸಿಕೆ ಪ್ರಯೋಗ ಮಾಡಲಾಗಿದ್ದು, ಮೇ ಅಂತ್ಯದ ವೇಳೆಗೆ 6000 ಜನರ ಮೇಲೆ ಲಸಿಕೆಯ ಪ್ರಯೋಗ ನಡೆಯಲಿದೆ. ಕೋವಿಡ್-19 ಲಸಿಕೆಗೆ ಸದ್ಯ ‘ChAdOx1 nCoV-19’ ಎಂದು ನಾಮಕರಣ ಮಾಡಲಾಗಿದ್ದು, ಕಳೆದ ಮಾರ್ಚ್ ನಲ್ಲಿ ಆರು ಮಂಗಗಳ ಮೇಲೆ ಈ ಲಸಿಕೆ ಪ್ರಯೋಗಿಸಲಾಗಿತ್ತು. ನಂತರ ಮಂಗಗಳನ್ನು ಕೊರೋನಾ ವೈರಸ್ ಗೆ ಎಕ್ಸ್ಪೋಸ್ ಮಾಡಲಾಗಿತ್ತು. ಇದರಿಂದ ವಿಜ್ಞಾನಿಗಳಿಗೆ ಭರವಸೆ ಮೂಡಿದೆ ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಲಸಿಕೆ ಪಡೆಯದ ಮಂಗಗಳು ಅನಾರೋಗ್ಯಕ್ಕೀಡಾದವು ಎಂದು ಸಂಶೋಧಕ ವಿನ್ಸೆಂಟ್ ಮನ್ಸ್ಟರ್ ತಿಳಿಸಿದ್ದಾರೆ.
ಲಸಿಕೆ ತಯಾರಿಸಲು ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಜತೆಗೆ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕೂಡ ಕೈಜೋಡಿಸಿದೆ.
ಆಕ್ಸ್ ಫರ್ಡ್ ತಂಡ ಮಾತ್ರ ಅಲ್ಲ.. ಎರಡು ಅಮೇರಿಕನ್ ಕಂಪನಿಗಳು (Moderna ಮತ್ತು Inovia) ಕೂಡ ಲಸಿಕೆ ಕಂಡುಹಿಡಿಯುವ ನಿಟ್ಟಿನಲ್ಲಿ ಹಲವು ಪ್ರಯೋಗಗಳನ್ನು ನಡೆಸುತ್ತಿವೆ. ಅತ್ತ ಚೀನಿ ಕಂಪನಿ Cansino ಕೂಡ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸುತ್ತಿವೆ.

ಮತ್ತಷ್ಟು ಸುದ್ದಿಗಳು

Latest News

ದಕ್ಷಿಣ ಆಫ್ರಿಕಾ ಕೊರೋನಾ ರೂಪಾಂತರಿಗೆ ಒಮಿಕ್ರೋನ್ ಎಂದು ನಾಮಕರಣ

newsics.com ವಾಷಿಂಗ್ಟನ್: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೋನಾ ರೂಪಾಂತರಿ ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿದೆ. ಅತ್ಯಂತ ಪ್ರಬಲ ರೂಪಾಂತರಿಯಾಗಿರುವ ಕಾರಣ ಇದು ವೇಗವಾಗಿ ಹರಡುತ್ತಿದೆ ಎಂಬ ಭೀತಿ ಮನೆ...

ವಿವಾಹಿತೆಯ ಜತೆ ಅಕ್ರಮ ಸಂಬಂಧ ಹೊಂದಿದ್ದ ಪೊಲೀಸ್ ಎಸ್ಐ ಅಮಾನತು

newsics.com ವಾರಂಗಲ್(ಆಂಧ್ರಪ್ರದೇಶ): ವಿವಾಹಿತೆಯ ಜತೆ ಅಕ್ರಮ ಸಂಬಂಧ ಹೊಂದಿರುವ ಆರೋಪದ ಮೇಲೆ ಪೊಲೀಸ್ ಎಸ್ಐ ಒಬ್ಬರನ್ನು ಅಮಾನತುಗೊಳಿಸಲಾಗಿದೆ. ವಾರಂಗಲ್‌ನ ‍ವನಪರ್ತಿ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಶೇಕ್ ಶಾಪಿ ಅಮಾನತುಗೊಂಡಿರುವ ಪೊಲೀಸ್ ಅಧಿಕಟರಿ. ನವೆಂಬರ್ 18ರಂದು ವಿವಾಹಿತೆಯ...

ಗುದದ್ವಾರಕ್ಕೆ ಏರ್ ಪಂಪ್: ಸ್ನೇಹಿತ ಸಾವು

newsics.com ಬೆಂಗಳೂರು: ತಮಾಷೆಗೆ ಸ್ನೇಹಿತನ ಗುದದ್ವಾರಕ್ಕೆ ಏರ್ ಪಂಪ್ ಮಾಡಿದ್ದು, ಆತ ಮೃತಪಟ್ಟ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ ರೆಹಮತ್ ಅಲಿ ಮೃತಪಟ್ಟ ವ್ಯಕ್ತಿ. ನವೆಂಬರ್ 16ರಂದು ಕೋಲ್ಕತ್ತಾದ ಗಿರಣಿಯಲ್ಲಿ ರಾತ್ರಿ...
- Advertisement -
error: Content is protected !!