ಶ್ರೀನಗರ: ದೇಶದ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀನಗರದ ಶ್ರೀಮಾತಾ ವೈಷ್ಣೋದೇವಿ ಪ್ರಸಾದ ಇನ್ಮುಂದೆ ನಿಮಗೆ ಮನೆಯ ಬಾಗಿಲಿನಲ್ಲೇ ಲಭ್ಯವಾಗಲಿದೆ. ಇಂತಹದೊಂದು ವಿನೂತನ ಪ್ರಯತ್ನಕ್ಕೆ ಶ್ರೀಮಾತಾವೈಷ್ಣೋದೇವಿ ದೇವಾಲಯದ ಆಡಳಿತ ಮಂಡಳಿ ಮುನ್ನುಡಿ ಬರೆದಿದ್ದು, ಸೋಮವಾರದಿಂದ ಈ ಸೇವೆ ವಿದ್ಯುಕ್ತವಾಗಿ ಆರಂಭಗೊಂಡಿದೆ.
ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅಧ್ಯಕ್ಷತೆಯಲ್ಲಿ ನಡೆದ ಎಸ್‍ಎಂವಿಡಿಎಸ್‍ಬಿ ಸಭೆಯಲ್ಲಿ ಈ ಸೇವೆಗೆ ಚಾಲನೆ ದೊರೆತಿದ್ದು, ದೇವಾಲಯಕ್ಕೆ ಭೇಟಿ ನೀಡಲು ಸಾಧ್ಯವಾಗದ ಭಕ್ತರು ತಮ್ಮ ಮನೆಗೆ ಪ್ರಸಾದ ತರಿಸಿಕೊಳ್ಳಬಹುದಾಗಿದೆ.
ಎಸ್‍ಎಂವಿಡಿಎಸ್‍ಬಿ ವೆಬ್‍ಸೈಟ್ ಮೂಲಕ ಪ್ರಸಾದವನ್ನು ಭಕ್ತರು ಬುಕ್ ಮಾಡಬಹುದಾಗಿದೆ. ಬುಕ್ಕಿಂಗ್ ನ 72 ಗಂಟೆಯಲ್ಲಿ ಭಕ್ತರ ಹೆಸರಿನಲ್ಲಿ ಪೂಜೆ ನಡೆಯುತ್ತದೆ. ಬಳಿಕ ಪೋಸ್ಟ್‍ನಲ್ಲಿ ಪ್ರಸಾದ ಕಳುಹಿಸಲಾಗುತ್ತದೆ. ಇದುವರೆಗೂ 1500ಕ್ಕೂ ಅಧಿಕ ಜನರಿಗೆ ಪೋಸ್ಟ್ ಮೂಲಕ ಪ್ರಸಾದ ಕಳುಹಿಸಲಾಗಿದೆ . ಇದಕ್ಕಾಗಿ ದೇವಾಲಯದ ಆಡಳಿತ ಮಂಡಳಿ ಅಂಚೆ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಮನೆ ಬಾಗಿಲಿಗೆ ಬರಲಿದೆ ಶ್ರೀಮಾತಾ ವೈಷ್ಣೋದೇವಿ ಪ್ರಸಾದ
Follow Us