ಬೆಂಗಳೂರು: ನಗರದ ವರ್ತೂರು ಕೆರೆ ಬಳಿ ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ಇಡೀ ಕೆರೆಯ ಸುತ್ತ ಹೊಗೆ ಆವರಿಸಿಕೊಂಡಿದೆ.
ಪ್ರತಿ ವರ್ಷ ಬೆಳ್ಳಂದೂರು ಮತ್ತು ವರ್ತೂರು ಕೆರೆ ಬಳಿ ಬೆಂಕಿ ಕಾಣಿಸಿಕೊಳ್ಳುವುದು ಮಾಮೂಲಿ ಎನ್ನುವಂತಾಗಿದ್ದು, ಸುತ್ತಮುತ್ತಲಿನವರಿಗೆ ಆತಂಕ ಶುರುವಾಗಿದೆ.
ಕಾರ್ಖಾನೆಗಳಿಂದ ತ್ಯಾಜ್ಯಗಳು ನೀರಿಗೆ ಹರಿದುಬರುತ್ತಿರುವುದರಿಂದ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದ್ದು, ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. 2019ರ ಜನವರಿಯಲ್ಲೂ ಕೆರೆ ಬಳಿ ಬೆಂಕಿ ಕಾಣಿಸಿಕೊಂಡು, ಸುಮಾರು 10 ಎಕರೆ ಪ್ರದೇಶವನ್ನು ಸುಟ್ಟಿತ್ತು.
ವರ್ತೂರು ಕೆರೆ ಬಳಿ ಮತ್ತೆ ಬೆಂಕಿ
Follow Us