Wednesday, November 30, 2022

‘ಫ್ಲೈಯಿಂಗ್ ಸಿಖ್’ ಖ್ಯಾತಿಯ ಮಿಲ್ಖಾ ಸಿಂಗ್ ಇನ್ನಿಲ್ಲ

Follow Us

newsics.com
ಚಂಡೀಗಢ: ಅಥ್ಲೀಟ್ ದಿಗ್ಗಜ, ಫ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್(91) ಇನ್ನಿಲ್ಲ.
ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ (ಪಿಜಿಐಎಂಇಆರ್) ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ (ಜೂ.18) ರಾತ್ರಿ 11:30ರ ಹೊತ್ತಿಗೆ ಕೊನೆಯುಸಿರೆಳೆದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಕೊರೋನಾ ಸೋಂಕಿನಿಂದ ತುತ್ತಾಗಿದ್ದ ಅವರು ಸೋಂಕಿನಿಂದ ಗುಣಮುಖರಾಗಿದ್ದರೂ ಕೊರೋನೋತ್ತರ ಸಮಸ್ಯೆಯಿಂದಾಗಿ‌ ಅಸುನೀಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಮಿಲ್ಖಾ ಸಿಂಗ್ ನಿಧನಕ್ಕೆ ಪ್ರಧಾನಿ‌ ಮೋದಿ, ಗೃಹಸಚಿವ ಅಮಿತ್ ಶಾ ಸಂತಾಪ ಸೂಚಿಸಿದ್ದಾರೆ.

ಕೊರೋನಾಗೆ ತುತ್ತಾಗಿದ್ದ ಅವರನ್ನು ಈ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಹಿಂದೆ ಮತ್ತೆ ಜ್ವರ ಕಾಣಿಸಿಕೊಂಡಿದ್ದು, ಆಕ್ಸಿಜನ್ ಪ್ರಮಾಣವೂ ಇಳಿಕೆಯಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಿಲ್ಖಾ ಸಿಂಗ್ ಒಲಿಂಪಿಕ್ಸ್ ನಲ್ಲಿ ಮೂರು ಬಾರಿ ಭಾರತವನ್ನು ಪ್ರತಿನಿಧಿಸಿದ್ದರು. 1960ರ ರೋಮ್ ಒಲಿಂಪಿಕ್ಸ್‌ನ 400 ಮೀಟರ್ಸ್ ಓಟದಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದರು. 1956 ಮತ್ತು 1964ರ ಒಲಿಂಪಿಕ್ಸ್‌ನಲ್ಲಿಯೂ ಭಾರತವನ್ನು ಪ್ರತಿನಿಧಿಸಿದ್ದರು. 1958ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಏಷ್ಯನ್ ಗೇಮ್ಸ್‌ನಲ್ಲಿ ನಾಲ್ಕು ಬಾರಿ ಚಿನ್ನ ಗೆದ್ದ ಹೆಗ್ಗಳಿಕೆ ಅವರದ್ದು.

ಕಳೆದ ಭಾನುವಾರವಷ್ಟೇ ಮಿಲ್ಖಾ ಸಿಂಗ್ ಪತ್ನಿ ನಿರ್ಮಲ್ ಕೌರ್(85) ಕೂಡ ಕೊರೋನಾ ಸೋಂಕಿನಿಂದ ಮೊಹಾಲಿಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

ಅಕ್ಟೋಬರ್’ನಲ್ಲೇ ಭಾರತಕ್ಕೆ‌ ಕೊರೋನಾ ಮೂರನೇ ಅಲೆ: ಶೇ.85 ತಜ್ಞರ ಅಭಿಮತ

ಲಸಿಕೆ ಕಂಡು ಓಡಿದರು ಸೋಲಿಗರು… ಮನವೊಲಿಸುವಲ್ಲಿ ಸೋತರು ಸಚಿವ ಸುರೇಶ್’ಕುಮಾರ್!

ಭಾರೀ‌ ಮಳೆ: ಮಾರ್ಕಂಡೇಯ ನದಿಯಲ್ಲಿ ರೈತ ಕೊಚ್ಚಿಹೋದ ಶಂಕೆ, ಇಂದು ಶೋಧ

ಚೆನ್ನೈನ 4 ಸಿಂಹಗಳಿಗೆ ಡೆಲ್ಟಾ ಮಾದರಿ ಕೊರೋನಾ ಸೋಂಕು

ಮತ್ತಷ್ಟು ಸುದ್ದಿಗಳು

vertical

Latest News

ನಟಿ ಮಲೈಕಾ ಅರೋರಾ ಪ್ರೆಗ್ನೆಂಟ್!

newsics.com ಮುಂಬೈ: ಬಾಲಿವುಡ್ ನಟಿ ಮಲೈಕಾ ಅರೋರಾ ಪ್ರಿಯತಮ ಅರ್ಜುನ್ ಕಪೂರ್ ಮಗುವಿಗೆ ತಾಯಿ ಆಗ್ತಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ. ಮಲೈಕಾ ಮತ್ತೆ ಪ್ರೆಗ್ನೆಂಟ್ ಆಗಿದ್ದಾರೆ ಸಂತಸದ ವಿಚಾರವನ್ನು...

ಹೃದಯಾಘಾತವಾಗಿ ದೇವಾಲಯದ ಆನೆ ಸಾವು

newsics.com ಪುದುಚೇರಿ: ಇತಿಹಾಸ ಪ್ರಸಿದ್ಧ ದೇಗುಲದ ಆನೆಯೊಂದು ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ಪುದುಚೇರಿಯಲ್ಲಿ ನಡೆದಿದೆ. ಪುದುಚೇರಿಯ ಪ್ರಸಿದ್ಧ ದೇವಾಲಯ ಮನಕುಲ ವಿನಾಯಕರ ದೇಗುಲಕ್ಕೆ ಸೇರಿದ್ದ ಆನೆ ಲಕ್ಷ್ಮಿ ವಿಹರಿಸುತ್ತಿದ್ದಾಗ ಹಠಾತ್ ಕುಸಿದಿದೆ. ಈ ವೇಳೆ ಆನೆಗೆ...

48,500 ವರ್ಷಗಳ ಹಿಂದಿನ ಝೋಂಬಿ ವೈರಸ್‌ ಪತ್ತೆ

newsics.com ಮಾಸ್ಕೋ: ಸೈಬೀರಿಯಾದಲ್ಲಿ 48,500 ವರ್ಷಗಳ ಹಿಂದಿನ ಝೋಂಬಿ ವೈರಸ್‌ ಪತ್ತೆಯಾಗಿದೆ. ರಷ್ಯಾ, ಜರ್ಮನಿ ಹಾಗೂ ಫ್ರಾನ್ಸಿನ ವಿಜ್ಞಾನಿಗಳು ಜಂಟಿಯಾಗಿ ಅಧ್ಯಯನ ನಡೆಸಿ ರಷ್ಯಾದ ಶೀತಲ ಮರುಭೂಮಿಯಾಗಿರುವ ಸೈಬೀರಿಯಾದಲ್ಲಿ ಹಿಮದಡಿಯಲ್ಲಿ ಹೂತಿರುವ 24ಕ್ಕೂ ಹೆಚ್ಚು ವೈರಸ್‌ಗಳನ್ನು ಪತ್ತೆ...
- Advertisement -
error: Content is protected !!