newsics.com
ಬಿಹಾರ: ಬಿಹಾರ ಸೇರಿದಂತೆ ದೇಶಾದ್ಯಂತ ಅಗ್ನಿಪಥ್ ಯೋಜನೆ ವಿರೋಧಿಸಿ ಜೂನ್ 16 ರಿಂದ 20 ರವರೆಗೆ ಐದು ದಿನಗಳ ಕಾಲ ಭಾರಿ ಕೋಲಾಹಲ ಸೃಷ್ಟಿಯಾಗಿತ್ತು. ಉದ್ರಿಕ್ತರ ಗುಂಪು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯುಂಟು ಮಾಡಿದ್ದರು.
ಇದೀಗ ಕಿಡಿಗೇಡಿಗಳು ರೈಲಿನ ಬೋಗಿಗಳಿಗೆ ಬೆಂಕಿ ಹಚ್ಚುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕಿಡಿಗೇಡಿಗಳು ಆರಾಮವಾಗಿ ಕುಳಿತುಕೊಂಡು ರಟ್ಟಿನ ಸಹಾಯದಿಂದ ರೈಲಿನ ಸೀಟ್ಗೆ ಬೆಂಕಿ ಹಚ್ಚುತ್ತಿದ್ದಾರೆ. ಜೊತೆಗೆ ಸ್ವತಃ ವಿಡಿಯೋ ಸಹ ಮಾಡಿದ್ದಾರೆ.