newsics.com
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಅಶಿಸ್ತು ಹಾಗೂ ಅನುಚಿತ ವರ್ತನೆ ಹಿನ್ನೆಲೆಯಲ್ಲಿ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ ಅವರನ್ನು ಭಾರತೀಯ ಕುಸ್ತಿ ಫೆಡರೇಷನ್ ಮಂಗಳವಾರ ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಇದೇ ಕಾರಣಕ್ಕಾಗಿ ಇನ್ನೋರ್ವ ಕುಸ್ತಿಪಟು ಸೋನಂ ಮಲಿಕ್ ಗೆ ನೋಟಿಸ್ ನೀಡಿದೆ.
ತಮ್ಮ ಪ್ರಾಯೋಜಕತ್ವವನ್ನು ಕೈಬಿಟ್ಟು ಇತರ ಕಂಪನಿಗಳ ಬಟ್ಟೆ ಧರಿಸಿ ವಿನೇಶ್ ಕಣಕ್ಕಿಳಿದಿದ್ದರು. ಭಾರತದ ಸಹ ಕುಸ್ತಿಪಟುಗಳೊಂದಿಗೆ ಗಲಾಟೆ ಮಾಡಿದ್ದರೆಂದೂ ಆರೋಪಿಸಲಾಗಿತ್ತು. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಭಾರತೀಯ ಕುಸ್ತಿ ಫೆಡರೇಶನ್ ಕ್ರಮ ಕೈಗೊಂಡಿದೆ.
ಆಗಸ್ಟ್ 16 ರೊಳಗೆ ನೋಟಿಸ್‌ಗೆ ಪ್ರತಿಕ್ರಿಯೆ ನೀಡುವಂತೆ ಡಬ್ಲ್ಯುಎಫ್‌ಐ ವಿನೇಶ್ ಫೋಗಟ್ ಅವರಿಗೆ ಸೂಚಿಸಿದೆ. ಪ್ರತಿಕ್ರಿಯೆ ನೀಡುವವರೆಗೂ ಯಾವುದೇ ಪಂದ್ಯಗಳಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಫೆಡರೇಷನ್ ಸ್ಪಷ್ಟಪಡಿಸಿದೆ.
ವಿನೇಶ್ ಫೋಗಟ್ ಟೋಕಿಯೊ ಒಲಿಂಪಿಕ್ಸ್ ಗೂ ಮುನ್ನ ಹಂಗೇರಿಯಲ್ಲಿ ತರಬೇತಿ ಪಡೆಯುತ್ತಿದ್ದರು. ಅಲ್ಲಿಂದ ನೇರವಾಗಿ ಟೋಕಿಯೊಗೆ ತೆರಳಿದ್ದರು. ವಿನೇಶ್ ಪೋಗಟ್ ಉಳಿದ ಆಟಗಾರರಂತೆ, ಕ್ರೀಡಾ ಗ್ರಾಮದಲ್ಲಿ ಉಳಿಯಲು ಮತ್ತು ಉಳಿದ ಕುಸ್ತಿಪಟುಗಳೊಂದಿಗೆ ಅಭ್ಯಾಸ ನಡೆಸಲು ನಿರಾಕರಿಸಿದ್ದರು.
ಟೋಕಿಯೋ ಒಲಿಂಪಿಕ್ಸ್ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ಸೋನಮ್ ಮಲಿಕ್ ಗೂ ಅನುಚಿತ ವರ್ತನೆಗಾಗಿ ನೋಟಿಸ್ ನೀಡಲಾಗಿದೆ. ಸೋನಂ ಮಲಿಕ್‌ಗೆ ಆಕೆ ಅಥವಾ ಆಕೆಯ ಕುಟುಂಬದ ಯಾರಾದರೂ ಫೆಡರೇಶನ್ ಕಚೇರಿಯಿಂದ ಪಾಸ್‌ಪೋರ್ಟ್ ತೆಗೆದುಕೊಳ್ಳಬೇಕು ಎಂದು ತಿಳಿಸಲಾಯಿತು. ಆದರೆ ಆಕೆ ತನ್ನ ಪರವಾಗಿ ಸಂಗ್ರಹಿಸಲು SAI ಅಧಿಕಾರಿಗಳಿಗೆ ಆದೇಶಿಸಿದ್ದಳು.
2028ರ ಒಲಿಂಪಿಕ್ಸ್’ಗೆ ಕ್ರಿಕೆಟ್ ಸೇರ್ಪಡೆಗೆ ಬಿಡ್ ಸಲ್ಲಿಸಲು ಮುಂದಾದ ಐಸಿಸಿ
ರಾಜ್ಯಗಳಿಗೆ ಓಬಿಸಿ ಪಟ್ಟಿ ಸೇರ್ಪಡೆ ಹೊಣೆ: ಲೋಕಸಭೆಯಲ್ಲಿ ಮಸೂದೆ ಅಂಗೀಕಾರ
ಗರ್ಭಿಣಿಯಾಗಿದ್ದಾಗ ಸೆಕ್ಸ್ ಮೇಲಿನ ಆಸಕ್ತಿ ಕಳೆದುಕೊಂಡೆ: ನಟಿ ಕರೀನಾ ಕಪೂರ್