newsics.com
ಸೊಳ್ಳೆಗಳು ಜನರ ದೇಹದ ಉಷ್ಣತೆ, ವಾಸನೆ ಹಾಗೂ ಉಸಿರಾಟದಿಂದ ಹೊರ ಸೂಸುವ ಕಾರ್ಬನ್ ಡೈ ಆಕ್ಸೈಡ್ನ್ನು ಆಧರಿಸಿ ತಮ್ಮ ಗುರಿಯನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಇದರ ಜೊತೆಯಲ್ಲಿ ಕೆಲವು ವೈರಸ್ಗಳು ಮನುಷ್ಯನ ದೇಹದ ವಾಸನೆಯನ್ನು ಬದಲಾಯಿಸುವ ಮೂಲಕ ಸೊಳ್ಳೆಯನ್ನು ಆ ಮನುಷ್ಯನತ್ತ ಬರುವಂತೆ ಮಾಡುತ್ತವೆ ಎಂದು ಅಧ್ಯಯನವೊಂದು ಹೇಳಿದೆ.
ಸೊಳ್ಳೆಯು ವೈರಸ್ ಹೊಂದಿರುವ ವ್ಯಕ್ತಿಗೆ ಕಚ್ಚಿ ಬಳಿಕ ಮತ್ತೊಬ್ಬ ವ್ಯಕ್ತಿಗೆ ಕಚ್ಚಿದಾಗ ಆ ವೈರಸ್ಗಳು ಮತ್ತೊಬ್ಬ ವ್ಯಕ್ತಿಯ ದೇಹಕ್ಕೂ ವ್ಯಾಪಿಸಬಹುದು. ಸೊಳ್ಳೆಗಳು ಅಸಿಟೋಫೆನೋನ್ ವಾಸನೆಗೆ ಹೆಚ್ಚು ಆಕರ್ಷಿತವಾಗುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ.