newsics.com
ನವದೆಹಲಿ: ಗೂಗಲ್ನಿಂದ ವಾಟ್ಸ್ಯಾಪ್ ಬಳಕೆದಾರರಿಗೆ ಸಿಗುತ್ತಿದ್ದ ವಾಟ್ಸ್ಯಾಪ್ ಬ್ಯಾಕಪ್ ಅನಿಯಮಿತ ಸೇವೆ ಶೀಘ್ರದಲ್ಲೇ ಕೊನೆಗೊಳ್ಳುವ ಸಾಧ್ಯತೆಯಿದೆ.
ಈಗ ಬಳಕೆದಾರರಿಗೆ Google ಡ್ರೈವ್ನಲ್ಲಿ WhatsApp ಬ್ಯಾಕಪ್ಗಳನ್ನು ಅನುಮತಿ ನೀಡಲಾಗತ್ತಿದ್ದು, ಇನ್ಮುಂದೆ ಈ ರೀತಿ ಅವಕಾಶ ಇರುವುದಿಲ್ಲ ಎಂದು WABetainfo ವರದಿ ತಿಳಿಸಿದೆ.
Googleನ ಮುಂಬರುವ ಸೀಮಿತ ಯೋಜನೆಯ ಭಾಗವಾಗಿ WhatsApp ಬಳಕೆದಾರರಿಗೆ ಕೇವಲ 2,000 ಮೆಗಾಬೈಟ್ಗಳನ್ನು ಮಾತ್ರ ಬ್ಯಾಕಪ್ ಮಾಡಲು ಅನುಮತಿಸಲಾಗುತ್ತದೆ ಎನ್ನಲಾಗಿದೆ. ಗೂಗಲ್ ಬಳಕೆದಾರರಿಗೆ ಹೆಚ್ಚುವರಿ ಶೇಖರಣಾ ಆಯ್ಕೆಗಳನ್ನು ನೀಡುತ್ತದೆ ಎನ್ನಲಾಗಿದ್ದು, ಆದರೆ ಇವುಗಳಿಗೆ ಶುಲ್ಕ ವಿಧಿಸಲಾಗುತ್ತದೆ ಎಂದು ಗೂಗಲ್ ಮೂಲಗಳು ತಿಳಿಸಿವೆ.
ಈ ಹೊಸ ವೈಶಿಷ್ಟ್ಯವು ಬಳಕೆದಾರರು ತಮ್ಮ ಸ್ಮಾರ್ಟ್ಫೋನ್ಗಳಿಂದ ಯಾವ ವಿಷಯವನ್ನು ಬ್ಯಾಕಪ್ ಮಾಡಬೇಕೆಂದು ನಿರ್ಧರಿಸಲು ಅವಕಾಶ ಕಲ್ಪಿಸುತ್ತದೆ. ಆಯ್ದ ಫೈಲ್ಗಳನ್ನು ಬ್ಯಾಕಪ್ ಮಾಡಲು ಅಗತ್ಯವಿರುವ ಗರಿಷ್ಠ ಸಂಗ್ರಹ ಗಾತ್ರವನ್ನು ಬಳಕೆದಾರರಿಗೆ ತೋರಿಸುತ್ತದೆ ಎಂದು ವರದಿ ತಿಳಿಸಿದೆ.
ರಾಜ್ಯದಲ್ಲಿಂದು 357 ಮಂದಿಗೆ ಕೊರೋನಾ ಸೋಂಕು, 438 ಜನ ಗುಣಮುಖ, 10 ಸಾವು