♦ ಭಾರತಕ್ಕೂ ಬರಲಿದೆ ಶೀಘ್ರ
ವಾಷಿಂಗ್ಟನ್: ಬೆರಳಂಚಿನ ಸಂದೇಶ ವಾಹಕ ವಾಟ್ಸಾಪ್ ಈಗ ನಮ್ಮ ಜೀವನಾಡಿಯಾಗಿಬಿಟ್ಟಿದೆ. ಆದರೆ ಈ ವಾಟ್ಸಾಪ್’ನಲ್ಲಿ ಇತ್ತೀಚೆಗೆ ಸತ್ಯಕ್ಕಿಂತ ಸುಳ್ಳು ಸಂದೇಶಗಳೇ ಹೆಚ್ಚಾಗಿ ಬಳಕೆದಾರರ ತಲೆನೋವಿಗೆ ಕಾರಣವಾಗಿತ್ತು.
ಆದರೆ ಇದೀಗ ಈ ಸಮಸ್ಯೆಗೆ ವಾಟ್ಸಾಪ್ ಪರಿಹಾರ ಕಂಡುಕೊಂಡಿದ್ದು, ನಿಮ್ಮ ವಾಟ್ಸಾಪ್’ಗೆ ಬಂದ ಮೆಸೇಜ್ ಸತ್ಯವೋ ಸುಳ್ಳೋ ಎಂಬುದನ್ನು ನೀವೇ ಪರಿಶೀಲಿಸಿಕೊಳ್ಳುವ ಅವಕಾಶ ಕಲ್ಪಿಸಿದೆ.
ಸುಳ್ಳು ಪತ್ತೆಹಚ್ಚುವ ಭೂತಗನ್ನಡಿ!
ಇಂತಹದೊಂದು ಹೊಸ ಫೀಚರ್ ಅನ್ನು ವಾಟ್ಸಾಪ್ ಬಳಕೆದಾರರಿಗಾಗಿ ಅಭಿವೃದ್ಧಿಪಡಿಸಿದೆ. ವಾಟ್ಸಾಪ್ ಸಂದೇಶದ ಪಕ್ಕದಲ್ಲಿರುವ ಭೂತಗನ್ನಡಿಯ ಐಕಾನ್ ಅನ್ನು ನೀವು ಟ್ಯಾಪ್ ಮಾಡುವ ಮೂಲಕ ಬಂದ ಮೆಸೇಜ್’ನ್ನು ನಿಮ್ಮ ಡಿಫಾಲ್ಟ್ ಬ್ರೌಸರ್ಗೆ ಕಳುಹಿಸಬೇಕು. ಅಲ್ಲಿ ಸಂದೇಶ ಅಪ್’ಲೋಡ್ ಆಗುತ್ತಿದ್ದಂತೆ ವೆಬ್’ನಲ್ಲಿ ಸರ್ಚ್’ಗೆ ಒಳಪಟ್ಟ ಸಂದೇಶ ಸತ್ಯವೋ ಅಥವಾ ಕಪೋಲಕಲ್ಪಿತ ಸುಳ್ಳೋ ತಿಳಿಯುತ್ತದೆ. ಅಲ್ಲದೆ ಅನೇಕ ಬಾರಿ ಫಾರ್ವರ್ಡ್ ಮಾಡಲಾದ ಸಂದೇಶಗಳನ್ನು ಹುಡುಕಲು ಸರಳವಾದ ಮಾರ್ಗವನ್ನು ಈ ಭೂತಗನ್ನಡಿಯ ಐಕಾನ್ ತೋರಲಿದೆ.
ಸದ್ಯದಲ್ಲೇ ಲಭ್ಯ
ಇನ್ನು ನಿಮಗೆ ಬಂದ ಸಂದೇಶ, ಸಂದೇಶದ ಮೇಲ್ಭಾಗದಲ್ಲಿ ಗೋಚರಿಸುವ ಫಾರ್ವರ್ಡ್ ಮಾಡಲಾದ ಲೇಬಲ್ ಮೂಲಕ ಫಾರ್ವರ್ಡ್ ಮಾಡಲಾಗಿದೆಯೇ ಎಂದು ನೋಡಲು ವಾಟ್ಸಾಪ್ ನಿಮಗೆ ಅನುಮತಿಸುತ್ತದೆ. ಅಲ್ಲದೆ ವಾಟ್ಸಾಪ್ ಸಂದೇಶವನ್ನು ನೋಡದೆಯೆ ತಮ್ಮ ಬ್ರೌಸರ್ಗಳಲ್ಲಿ ಫಾರ್ವರ್ಡ್ ಮಾಡಿದ ಸಂದೇಶಗಳನ್ನು ಅಪ್ಲೋಡ್ ಮಾಡಲು ಸಾಧ್ಯವಾಗಲಿದೆ ಎಂದು ವಾಟ್ಸಾಪ್ ಹೇಳಿದೆ.
ಮೈಸೂರು ಸೇರಿ ದೇಶದ 17 ಕಡೆ 1600 ಮಂದಿ ಮೇಲೆ ಆಕ್ಸ್ಫರ್ಡ್ ವಿವಿ ಲಸಿಕೆ ಪ್ರಯೋಗ
ಪ್ರಸ್ತುತ, ಆಂಡ್ರಾಯ್ಡ್, ಐಫೋನ್ ಮತ್ತು ವಾಟ್ಸಾಪ್ ವೆಬ್ನಲ್ಲಿ ವಾಟ್ಸಾಪ್ನ ಇತ್ತೀಚಿನ ಆವೃತ್ತಿಯನ್ನು ಹೊಂದಿರುವ ಬಳಕೆದಾರರಿಗಾಗಿ ಇದನ್ನು ರೂಪಿಸಲಾಗಿದ್ದು, ಇದು ಸದ್ಯ ಬ್ರೆಜಿಲ್, ಇಟಲಿ, ಐರ್ಲೆಂಡ್, ಮೆಕ್ಸಿಕೊ, ಸ್ಪೇನ್, ಯುಕೆ ಮತ್ತು ಯುಎಸ್ನ ವಾಟ್ಸಪ್ ಬಳಕೆದಾರರಿಗೆ ಮಾತ್ರ ಲಭ್ಯವಿದ್ದು ಉಳಿದ ರಾಷ್ಟ್ರಗಳಿಗೆ ಸದ್ಯದಲ್ಲೇ ಲಭ್ಯವಾಗಲಿದೆ.
ರಾಮಮಂದಿರಕ್ಕೆ ಶಿಲಾನ್ಯಾಸ; ನಾಳೆ ರಾಜ್ಯದ ಎಲ್ಲ ದೇಗುಲಗಳಲ್ಲಿ ವಿಶೇಷ ಪೂಜೆ
ಆದರೆ ಇಂತಹದೊಂದು ಫೀಚರ್ ಬರುತ್ತಿದ್ದಂತೆ ಭಾರತದ ವಾಟ್ಸಾಪ್ ಬಳಕೆದಾರರು ಖುಷಿಯಾಗಿದ್ದು, ‘ಇದು ಅತಿ ಅಗತ್ಯವಿರೋದು ಭಾರತಕ್ಕೆ’ ಎಂದು ಅಭಿಪ್ರಾಯಿಸುತ್ತಿರುವುದಂತೂ ಸತ್ಯ.
ರಾಜ್ಯದಲ್ಲಿ ಕೋರ್ಟ್ ಕಲಾಪ ಪುನಾರಂಭ ಸದ್ಯಕ್ಕೆ ಅಸಾಧ್ಯ- ಹೈಕೋರ್ಟ್