Wednesday, May 31, 2023

ಶಾಲಾ ಮಕ್ಕಳಿಗೆ ನೀಡುವುದು ಯಾವ ಮೊಟ್ಟೆ?

Follow Us

ಪೌಷ್ಟಿಕಾಂಶದ ಆಗರ ಕೋಳಿಮೊಟ್ಟೆ

ಬೆಳೆಯುವ ಮಕ್ಕಳಿಗೆ ಕೋಳಿಮೊಟ್ಟೆ ಅತ್ಯುತ್ತಮ ಪೂರಕ ಆಹಾರ. ಮೊಟ್ಟೆಯಲ್ಲಿರುವ ಹಲವು ಪೌಷ್ಟಿಕಾಂಶಗಳು ಮಕ್ಕಳ ಬೆಳವಣಿಗೆಗೆ ಸಹಾಯಕ. ಇತ್ತೀಚೆಗೆ, ಸರ್ಕಾರಿ ಶಾಲೆಯ ಮಕ್ಕಳಿಗೆ ಬಿಸಿಯೂಟದೊಂದಿಗೆ ಕೋಳಿಮೊಟ್ಟೆ ನೀಡುವ ಕುರಿತು ವಾದ-ವಿವಾದಗಳು ತಾರಕಕ್ಕೇರಿವೆ. ಪ್ರಗತಿಪರರು ಈ ಕುರಿತು ಸರ್ಕಾರದ ಮೇಲೆ ಸಾಕಷ್ಟು ಒತ್ತಾಯವನ್ನೂ ಹೇರುತ್ತಿದ್ದಾರೆ. ಆದರೆ, ಸಾಮಾನ್ಯ ಫಾರಂಗಳಲ್ಲಿ ಕೋಳಿಗಳನ್ನು ಸಾಕುವ ವಿಧಾನದ ಬಗ್ಗೆ ಅಪಸ್ವರವಿದೆ. ಅಂತಹ ಮೊಟ್ಟೆಗಳನ್ನು ಮಕ್ಕಳಿಗೆ ಕೊಡುವುದು ನ್ಯಾಯವೇ ಎನ್ನುವ ಪ್ರಶ್ನೆ ಎದ್ದಿದೆ.


– ಡಾ. ಲಕ್ಷ್ಮೀ ಎಸ್.
newsics.com@gmail.com

ರ್ಕಾರಿ ಶಾಲೆಯ ಮಕ್ಕಳಿಗೆ ಮೊಟ್ಟೆ ನೀಡುವ ವಿಚಾರ ಈಗ ಸಾಕಷ್ಟು ಚರ್ಚೆಯಲ್ಲಿದೆ. ಇದು ಸರಿಯೇ, ತಪ್ಪೇ ಎನ್ನುವ ಕುರಿತು ಸಾಕಷ್ಟು ವಾದ-ವಿವಾದಗಳೂ ನಡೆಯುತ್ತಿವೆ. ಒಂದು ವರ್ಗ ಮೊಟ್ಟೆ ಸೇವನೆ ಮಕ್ಕಳ ಆರೋಗ್ಯಕ್ಕೆ ಅತ್ಯಂತ ಪೂರಕವಾಗಿರುವುದರಿಂದ ಮೊಟ್ಟೆಯನ್ನು ಬಿಸಿಯೂಟದೊಂದಿಗೆ ಕಡ್ಡಾಯವಾಗಿ ನೀಡಬೇಕು ಎಂದಿದ್ದರೆ, ಮತ್ತೊಂದು ವರ್ಗ ಎಲ್ಲ ಮಕ್ಕಳಿಗೂ ಮೊಟ್ಟೆ ನೀಡುವುದು ನ್ಯಾಯವಲ್ಲ, ಆಹಾರ ಪದ್ಧತಿಯಲ್ಲಿ ವ್ಯತ್ಯಾಸವಿರುತ್ತದೆ ಎಂದು ಹೇಳುತ್ತಿದೆ. ಈ ಕುರಿತ ವಾದ-ವಿವಾದಗಳು ಏನೇ ಇರಲಿ, ಯಾವುದೇ ರಾಸಾಯನಿಕ ಬೆರೆಯದ, ಆ್ಯಂಟಿಬಯಾಟಿಕ್‌ಗಳನ್ನು ಹೊಂದಿರದ ಮೊಟ್ಟೆ ಬೆಳೆಯುವ ಮಕ್ಕಳಿಗೆ ಅತ್ಯಂತ ಉತ್ತಮ ಎನ್ನುವುದರಲ್ಲಿ ಎರಡು ಮಾತಿಲ್ಲ.
ಆದರೆ, ಸಮಸ್ಯೆ ಇರುವುದು ಡೈರಿ ಉದ್ಯಮದಲ್ಲಿ. ಕೋಳಿ ಸಾಕಣೆ ಸೂಕ್ಷ್ಮವಾದ ಉದ್ಯಮ. ಸಾವಿರಾರು ಕೋಳಿಗಳನ್ನು ಸಾಕುವುದು, ನಿಭಾಯಿಸುವುದು ಸುಲಭವಲ್ಲ. ಇಲ್ಲಿ ಕೋಳಿ ಚೆನ್ನಾಗಿ ಬೆಳೆಯಲು, ದೇಹ ಸೊಕ್ಕಲು, ಸಂತಾನೋತ್ಪತ್ತಿ ಮಾಡಲು ಔಷಧಗಳನ್ನು ನೀಡಲಾಗುತ್ತದೆ. ಪ್ರತಿ ಹಂತದಲ್ಲೂ ಆ್ಯಂಟಿಬಯಾಟಿಕ್, ಹಾರ್ಮೋನುಗಳನ್ನು ನೀಡಲಾಗುತ್ತದೆ. ಸಾಕಷ್ಟು ಆ್ಯಂಟಿಬಯಾಟಿಕ್‌ಗಳನ್ನು ಪಡೆದು ಕೊಬ್ಬಿದ ಕೋಳಿ ನೀಡುವ ಮೊಟ್ಟೆ ಸೇವನೆಗೆ ಅದೆಷ್ಟು ಸೂಕ್ತ ಎನ್ನುವುದು ಪ್ರಶ್ನೆ. ಈ ಕುರಿತು ಸಾಕಷ್ಟು ಅಧ್ಯಯನಗಳೂ ನಡೆದಿವೆ. ಇಂತಹ ಮೊಟ್ಟೆಗಳನ್ನು ತಿನ್ನುವ ಮಕ್ಕಳ ಆರೋಗ್ಯ ಏನಾಗಬಹುದು ಎನ್ನುವುದಷ್ಟೇ ಇಲ್ಲಿನ ಆತಂಕ. ಈ ನಿಟ್ಟಿನಲ್ಲಿ ಕೋಳಿಸಾಕಣೆ ಉದ್ಯಮಗಳಿಂದ ಪಡೆಯುವ ಕೋಳಿಮೊಟ್ಟೆಗಳನ್ನು ಮಕ್ಕಳಿಗೆ ನೀಡದಿರುವುದೇ ಹೆಚ್ಚು ಸೂಕ್ತ.
ಇದೊಂದು ಅಂಶವನ್ನು ಹೊರತುಪಡಿಸಿದರೆ ಮೊಟ್ಟೆ ಆರೋಗ್ಯಕ್ಕೆ ಅತ್ಯಂತ ಪೂರಕ. ಮಕ್ಕಳಿಗಂತೂ ಮೊಟ್ಟೆ ಅಪೂರ್ವ ಆಹಾರ. ವಿವಿಧ ಪೌಷ್ಟಿಕಾಂಶಗಳ ಆಗರ. ವಿಟಮಿನ್ ಬಿ6, ಬಿ12, ಫೋಲೇಟ್, ಕೊಲಿನ್‌ನಂತಹ ಪೌಷ್ಟಿಕಾಂಶಗಳನ್ನು ಹೊಂದಿರುವ ಮೊಟ್ಟೆ ಮಿದುಳಿನ ಆರೋಗ್ಯಕ್ಕೆ ಉಪಯುಕ್ತವಾಗಿದೆ.
ಮೊಟ್ಟೆಯಿಂದ ಹಲವು ಪ್ರಯೋಜನ…
ಕೊಲಿನ್ ಅಂಶವು ಮನಸ್ಸಿನ ಸ್ಥಿತಿಗತಿ ಉತ್ತಮಪಡಿಸಲು ಮತ್ತು ಸ್ಮರಣೆ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅಧ್ಯಯನದ ಪ್ರಕಾರ, ಕೊಲಿನ್ ಅಂಶವು ಮಿದುಳಿನ ಕಾರ್ಯಕ್ಷಮತೆ ಹೆಚ್ಚಿಸುತ್ತದೆ. ಆದರೆ, ಅನೇಕ ಜನರ ಆಹಾರದಲ್ಲಿ ಕೊಲಿನ್ ಅಂಶ ಕಡಿಮೆಯಾಗಿರುತ್ತದೆ. ಮೊಟ್ಟೆಯ ಸೇವನೆಯಿಂದ ಈ ಕೊರತೆ ಬಗೆಹರಿಯುತ್ತದೆ. ಒಂದು ಮೊಟ್ಟೆಯಲ್ಲಿ 112 ಎಂಜಿ ಕೊಲಿನ್ ಅಂಶವಿರುತ್ತದೆ. ಸಂಶೋಧನೆಗಳ ಪ್ರಕಾರ, ಮಹಿಳೆಯರಿಗೆ 425 ಎಂಜಿ, ಪುರುಷರಿಗೆ 550 ಎಂಜಿ ಕೊಲಿನ್ ಅಂಶದ ಅಗತ್ಯವಿರುತ್ತದೆ.
ಇನ್ನು, ಮೊಟ್ಟೆಯಲ್ಲಿರುವ ವಿಟಮಿನ್ ಬಿ ಅಂಶವೂ ಮಿದುಳಿನ ಆರೋಗ್ಯದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ವಯಸ್ಸಾದಂತೆ ಕಂಡುಬರುವ ಮರೆವು ರೋಗ ಬಾರದಂತೆ ಮಾಡಲು ಮೊಟ್ಟೆ ಸೇವನೆ ಸೂಕ್ತ. ಅಲ್ಲದೆ, ಖಿನ್ನತೆಗೂ ಬಿ ವಿಟಮಿನ್ ಹಾಗೂ ಫೋಲೇಟ್‌ಗಳು ಪರಿಣಾಮಕಾರಿ ಪರಿಹಾರ.
ವಯಸ್ಸಾದ ಬಳಿಕ ಫೋಲೇಟ್ ಅಂಶ ಕಡಿಮೆಯಾಗುವುದು ಸಾಮಾನ್ಯ. ಅವರು ವಯೋಸಹಜ ಸಮಸ್ಯೆಗಳಿಂದ ಬಳಲದಂತಿರಲು ಮೊಟ್ಟೆಯನ್ನು ಸೇವಿಸಬೇಕು. ಇದರಿಂದ ಮಿದುಳಿನ ಕ್ಷಮತೆ ಕುಗ್ಗುವುದಿಲ್ಲ. ಮಿದುಳಿಗೊಂದೇ ಅಲ್ಲ, ಮೂಳೆಗಳು ಸದೃಢವಾಗಲೂ ಮೊಟ್ಟೆಯಲ್ಲಿರುವ ಅಂಶಗಳು ಸಹಾಯಕವಾಗಿವೆ.
ಕೊನೆಯದಾಗಿ, ಮೊಟ್ಟೆ ಆರೋಗ್ಯಕ್ಕೆ ಉತ್ತಮ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ, ಸರ್ಕಾರ ವಿತರಿಸುವ ಮೊಟ್ಟೆ ಯಾವ ರೀತಿಯಲ್ಲಿ ಉತ್ಪಾದನೆಯಾಗಿರುವಂಥದ್ದು ಎನ್ನುವುದೇ ಇಲ್ಲಿರುವ ಪ್ರಶ್ನೆ.

ಮತ್ತಷ್ಟು ಸುದ್ದಿಗಳು

vertical

Latest News

ಪುಷ್ಪಾ 2 ಶೂಟಿಂಗ್‌ ಮುಗಿಸಿ ವಾಪಸ್ ತೆರಳಿದ್ದ ಕಲಾವಿದರ ಬಸ್‌ ಅಪಘಾತ

newsics.com ಅಲ್ಲು ಅರ್ಜುನ್- ರಶ್ಮಿಕಾ ಮಂದಣ್ಣ ನಟನೆಯ 'ಪುಷ್ಪ 2' ಸಿನಿಮಾದಲ್ಲಿ ನಟಿಸುತ್ತಿದ್ದ ಸಹ ಕಲಾವಿದರು ಚಿತ್ರೀಕರಣದಲ್ಲಿ ಭಾಗವಹಿಸಿ ವಾಪಸ್ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ತೆಲಂಗಾಣದ...

ಆದಾಯ ತೆರಿಗೆ ಅಧಿಕಾರಿಗಳಂತೆ ವೇಷ ಧರಿಸಿ ಚಿನ್ನ ಕದ್ದ ಕಳ್ಳರು

newsics.com ಹೈದರಾಬಾದ್: ಆದಾಯ ತೆರಿಗೆ ಅಧಿಕಾರಿಗಳಂತೆ ವೇಷ ಧರಿಸಿ ಹೈದರಾಬಾದ್‌ನ ಅಂಗಡಿಯೊಂದರಲ್ಲಿ 60 ಲಕ್ಷ ರೂ. ಮೌಲ್ಯದ ಚಿನ್ನದ ಬಿಸ್ಕತ್‌ಗಳನ್ನು ಕದ್ದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ರೆಹಮಾನ್...

ಮಲಯಾಳಂ ಚಿತ್ರರಂಗದ ಖ್ಯಾತ ನಟ ಹರೀಶ್ ಪೆಂಗನ್ ನಿಧನ

newsics.com ಮಲಯಾಳಂ ಚಿತ್ರರಂಗದ ಖ್ಯಾತ ಕಲಾವಿದ ಹರೀಶ್ ಪೆಂಗನ್ ಅವರು ಮಂಗಳವಾರ (ಮೇ 30) ನಿಧನ ಹೊಂದಿದ್ದಾರೆ. ಅವರಿಗೆ 49 ವರ್ಷ ವಯಸ್ಸಾಗಿತ್ತು. ಹರೀಶ್ ಅವರು ಕಳೆದ ಕೆಲ ವರ್ಷಗಳಿಂದ ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದರು....
- Advertisement -
error: Content is protected !!