ನವದೆಹಲಿ: ಕೊರೋನಾ ಸೋಂಕು ತಡೆಗೆ ಮಲೇರಿಯಾ ಔಷಧ ಅಲ್ಲ ಎಂದಿರುವ ವಿಶ್ವ ಆರೋಗ್ಯ ಸಂಸ್ಥೆ, ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯ ಬಳಕೆಗೆ ನಿಷೇಧ ಹೇರಿದೆ.
ದಿ ಲ್ಯಾನ್ಸೆಂಟ್ ಮ್ಯಾಗಜಿನ್ ನ ಸಂಶೋಧನಾ ವರದಿ, ಮಲೇರಿಯಾಕ್ಕೆ ಬಳಸುವ ಎಚ್ಸಿಕ್ಯೂ ಮಾತ್ರೆಯನ್ನು ಕೊರೋನಾ ಸೋಂಕಿತರಿಗೆ ನೀಡಿದರೆ ಸಾವಿನ ಪ್ರಮಾಣ ಹೆಚ್ಚುತ್ತದೆ. ಹೀಗಾಗಿ ಕೋವಿಡ್-19ಗೆ ಮಲೇರಿಯಾಗೆ ಬಳಸುವ ಔಷಧ ಬಳಸುವುದು ಸರಿಯಲ್ಲ ಎಂದು ಹೇಳಿತ್ತು.
ಸದ್ಯ ಭಾರತವೂ ಸೇರಿ ಹತ್ತು ರಾಷ್ಟ್ರಗಳಲ್ಲಿ ಎಚ್ಸಿಕ್ಯೂ ಮಾತ್ರೆ ಬಳಸಲಾಗುತ್ತಿದ್ದು, ಇದಕ್ಕೆ ಈಗ ಡಬ್ಲೂಎಚ್ಒ ಕಡಿವಾಣ ಹಾಕಿದೆ.
ಕೇಂದ್ರ ಸರ್ಕಾರ ಕೊರೋನಾ ವೈರಸ್ ಗೆ ಮಲೇರಿಯಾಗೆ ಬಳಸುವ ಔಷಧವನ್ನೇ ಬಳಸುತ್ತಿದ್ದು, ಇದು ಪರಿಣಾಮಕಾರಿಯಾಗಿದೆ ಎಂದು ಹೇಳಿಕೊಂಡಿತ್ತು. ಅಲ್ಲದೇ ಅಮೆರಿಕ ಸೇರಿ ಹಲವು ರಾಷ್ಟ್ರಗಳಿಗೆ ಟನ್ ಗಟ್ಟಲೆ ಔಷಧ ಕಳುಹಿಸಿತ್ತು.