Saturday, April 17, 2021

ಪತ್ನಿ ಭಾರತಕ್ಕೆ, ಪತಿ ಬಾರದ ಲೋಕಕ್ಕೆ…

♦ ಪತಿಯ ವಿಯೋಗದ ನಡುವೆಯೇ ಆಥಿರಾ ಹೆಣ್ಣುಮಗುವಿಗೆ ಜನ್ಮ

ದುಬೈ: ದುಬೈನಲ್ಲಿ ಇಂಜಿನಿಯರ್ ಆಗಿದ್ದ ಪತಿ ಲಾಕ್‌ಡೌನ್ ಗೆ ಹೆದರಿ ಗರ್ಭಿಣಿ ಪತ್ನಿಯನ್ನು ಭಾರತಕ್ಕೆ ಕಳುಹಿಸಿದ್ದ. ಆದರೆ, ಆತನೂ ಭಾರತಕ್ಕೆ ಬಂದು ಮಗುವಿನ ಮುಖ ನೋಡುವ ಮೊದಲೇ ವಿಧಿ ಆತನನ್ನು ಬಾರದ ಲೋಕಕ್ಕೆ‌ ಕಳುಹಿಸಿದೆ. ಪತಿಯ ವಿಯೋಗದ ನಡುವೆಯೇ ಆಥಿರಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಆಥಿರಾ ಹೆರಿಗೆಗಾಗಿ ತಿಂಗಳ ಮುಂಚೆಯೇ ಭಾರತಕ್ಕೆ ಆಗಮಿಸಿದ್ದರು. ಆದರೆ ನಿತಿನ್ ಚಂದ್ರನ್ ಗೆ ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಅನಾರೋಗ್ಯ ಕಾಡುತ್ತಿತ್ತು. ಸೋಮವಾರದಂದು ತೀವ್ರ ಅನಾರೋಗ್ಯದಿಂದ ನಿತಿನ್ ಚಂದ್ರನ್ ದುಬೈ ನಲ್ಲಿ ಮೃತಪಟ್ಟಿದ್ದಾರೆ. ದುಬೈ ನ ಇಂಟರ್ನ್ಯಾಷನಲ್ ಸಿಟಿ ಅಪಾರ್ಟ್ಮೆಂಟ್ ನಲ್ಲಿ ನಿತಿನ್ ಮೃತಪಟ್ಟಿದ್ದಾರೆ. ಈ ಮಾಹಿತಿ ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಕಾಣಿಸುತ್ತಿದ್ದಂತೆಯೇ ಅಥಿರಾ ಕುಟುಂಬ ಸದಸ್ಯರು ಆಕೆಯನ್ನು ಕೋಯಿಕ್ಕೋಡ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆಯ ಸ್ಥಿತಿಯನ್ನು ಗಮನಿಸಿದ ವೈದ್ಯರು ಅವಧಿಗೂ ಮುನ್ನ ಸಿ ಸೆಕ್ಷನ್ ಮಾಡಿ ಹೆರಿಗೆ ಮಾಡಿಸಿದ್ದಾರೆ. ಪತಿಯ ವಿಯೋಗದ ನಡುವೆಯೇ ಆಥಿರಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.
ಕೇರಳ ಮೂಲದ ಯುವಕ ನಿತಿನ್ ಚಂದ್ರ ದುಬೈನಲ್ಲಿ ಕನಸ್ಟ್ರಕ್ಷನ್ ಇಂಜಿನಿಯರ್ ಆಗಿ 6 ವರ್ಷದಿಂದ ಕೆಲಸ ಮಾಡುತ್ತಿದ್ದರು. ಕಳೆದ ಎರಡು ವರ್ಷದ ಹಿಂದೆ ಮದುವೆಯಾದ ನಿತಿನ್ ಪತ್ನಿ ಅಥಿರಾರನ್ನು ದುಬೈಗೆ ಕರೆದೊಯ್ದಿದ್ದರು. ಕೊರೋನಾ ವ್ಯಾಪಿಸುವ ಹೊತ್ತಿನಲ್ಲಿ ಗರ್ಭಿಣಿಯಾಗಿದ್ದ ಅಥಿರಾರನ್ನು ಭಾರತಕ್ಕೆ ಕಳುಹಿಸಲು ಪ್ರಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ. ಹೀಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋದ ನಿತಿನ್ ಪತ್ನಿಯನ್ನು ಭಾರತಕ್ಕೆ ಕಳುಹಿಸಿಕೊಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಿದ್ದರು. ಕೊನೆಗೂ ಕಾನೂನು ಸಮರದಲ್ಲಿ ಗೆದ್ದ ನಿತಿನ್ ಪತ್ನಿಯನ್ನು ಭಾರತಕ್ಕೆ‌ ಕಳುಹಿಸಿಕೊಟ್ಟರು. ವಂದೇ ಮಾತರಂ ಮಿಶನ್ ಅಡಿಯಲ್ಲಿ ನಿತಿನ್ ಪತ್ನಿ ಭಾರತ ಸೇರಿದರು.
ರಜೆ ಸಿಗದ ಕಾರಣಕ್ಕೆ ನಿತಿನ್ ಭಾರತಕ್ಕೆ ಬಂದಿರಲಿಲ್ಲ. ಜುಲೈನಲ್ಲಿ ಅಥಿರಾ ಹೆರಿಗೆ ವೇಳೆಗೆ ಭಾರತಕ್ಕೆ ಬರುವ ಯೋಜನೆಯಲ್ಲಿದ್ದರು. ಆದರೆ ಪುಟ್ಟ ಕಂದನ ಮುಖ ನೋಡುವ ಮುನ್ನವೇ 28 ವರ್ಷದ ನಿತಿನ್ ಹೃದಯಾಘಾತದಿಂದ ಜೂನ್ 7 ರಂದು ಕೊನೆಯುಸಿರೆಳೆದರು. ಹೈ ಬಿಪಿ ಸಮಸ್ಯೆಯಿಂದ ಬಳಲುತ್ತಿದ್ದ ನಿತಿನ್ ಅದಕ್ಕಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಜೂನ್ 7ರಂದು ಅವರಿಗೆ ನಿದ್ರೆಯಲ್ಲಿದ್ದಾಗಲೇ ಹೃದಯಾಘಾತ ಸಂಭವಿಸಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿಗಳು

Latest News

ತ್ರಿಬಲ್ ಟಿ ಸೂತ್ರ ಪಾಲನೆಗೆ ಪ್ರಧಾನಿ ಮೋದಿ ಸಲಹೆ

newsics.com ನವದೆಹಲಿ: ಇಂದಿಲ್ಲಿ (ಏ.17) ನಡೆದ ಕೊರೋನಾ ಹಿನ್ನೆಲೆಯ ಮಹತ್ವದ ಸಭೆಯ ಬಳಿಕ ಪ್ರಧಾನಿ ಮೋದಿಯವರು ತ್ರಿಬಲ್ ಟಿ ಸೂತ್ರ ಅನುಷ್ಠಾನಗೊಳಿಸುವಂತೆ ಸೂಚಿಸಿದ್ದಾರೆ. ದೇಶದಲ್ಲಿ ಅತಿಯಾಗಿ ಹೆಚ್ಚುತ್ತಿರುವ ಕೊರೋನಾ...

ಆಮ್ಲಜನಕ‌ ಕೊರತೆ: ಐಸಿಯುನಲ್ಲಿದ್ದ ಮೂವರು ಕೊರೋನಾ ಸೋಂಕಿತರು ಸಾವು

newsics.com ಲಖನೌ (ಉತ್ತರ ಪ್ರದೇಶ): ಆಮ್ಲಜನಕದ ಕೊರತೆಯಿಂದಾಗಿ ಮೂವರು ಕೋವಿಡ್ ರೋಗಿಗಳು ಶನಿವಾರ ಸಾವನ್ನಪ್ಪಿದ್ದಾರೆ. ಮೃತರು ಗೋಮ್ಟಿನಗರದ ಡಾ. ರಾಮ್ ಮನೋಹರ್ ಲೋಹಿಯಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಐಸಿಯುಗೆ ದಾಖಲಾಗಿದ್ದರು. ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು,...

ಆಸ್ಪತ್ರೆಗೆ ನುಗ್ಗಿ 850 ರೆಮಿಡಿಸಿವರ್ ಇಂಜೆಕ್ಷನ್ ಕಳ್ಳತನ

newsics.com ಭೋಪಾಲ್(ಮಧ್ಯಪ್ರದೇಶ): ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿಗಳು 850 ರೆಮಿಡಿಸಿವರ್ ಇಂಜೆಕ್ಷನ್ ಗಳನ್ನು ಕಳ್ಳತನ ಮಾಡಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ನಡುವೆ ಕಾಳಸಂತೆಯಲ್ಲಿ ಔಷಧ ಮಾರಾಟದ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಈ...
- Advertisement -
error: Content is protected !!