newsics.com
ಹೈದರಾಬಾದ್: ಎಂಟನೇ ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ದೇಶ, ವಿದೇಶಗಳಲ್ಲಿ ಗಣ್ಯರು, ಯೋಗಾಸಕ್ತರು ಸೇರಿದಂತೆ ಕೋಟ್ಯಂತರ ಮಂದಿ ಯೋಗ ಮಾಡಿದ್ದಾರೆ.ಹೀಗೆಯೇ ಬಿಹಾರದಯು ಯುವಕನೋರ್ವ ಯೋಗಾಸನದ ಜೊತೆಗೆ ಹೊಸ ದಾಖಲೆ ಬರೆದಿದ್ದಾನೆ.
ಬಿಹಾರದ ನಳಂದ ಜಿಲ್ಲೆಯ ನಿರ್ಪುರ್ ಗ್ರಾಮದ ಸೋನು ಕುಮಾರ್ ಎಂಬಾತ ಹೈದರಾಬಾದ್ ನ ಚಾರ್ಮಿನಾರ್ ಎದುರು ಬರೋಬ್ಬರಿ 3 ಗಂಟೆ, 3 ನಿಮಿಷ, 33 ಸೆಕೆಂಡುಗಳ ಕಾಲ ಶೀರ್ಷಾಸನ ಮಾಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಕಳೆದ 6 ವರ್ಷಗಳಿಂದ ಇವರು ಯೋಗಾಭ್ಯಾಸ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.