newsics.com
ಬೆಂಗಳೂರು: ಸ್ವಾಮೀಜಿ ಬಾಯಲ್ಲಿದ್ದ ಎಂಜಲು ಅನ್ನವನ್ನು ತೆಗೆಸಿ ಅದನ್ನು ತಿನ್ನುವ ಮೂಲಕ ಶಾಸಕ ಜಮೀರ್ ಅಹ್ಮದ್ ಅತಿರೇಕ ಮೆರೆದಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧದ ವಿಡಿಯೋ ವೈರಲ್ ಆಗಿದೆ.
ಜಮೀರ್ ಅಹ್ಮದ್ ವೇದಿಕೆಯ ಮೇಲೆ ಸ್ವಾಮೀಜಿಯೊಬ್ಬರಿಗೆ ಕೈತುತ್ತು ತಿನ್ನಿಸಿ ಬಳಿಕ ಸ್ವಾಮೀಜಿ ಬಾಯಿಯಿಂದ ಎಂಜಲು ಅನ್ನವನ್ನು ತೆಗೆಸಿ ತಮ್ಮ ಬಾಯಿಗೆ ಹಾಕಿಸಿಕೊಂಡಿದ್ದಾರೆ.
ಚಾಮರಾಜಪೇಟೆಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಹಾಗೂ ಇದ್ ಮಿಲನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ದಲಿತ ಅಡುಗೆಯವರು ಮಾಡಿದ ಊಟ ಮಾಡಲು ಶಾಲಾ ಮಕ್ಕಳು ವಿರೋಧ ಮಾಡಿದ್ದರು. ಈ ಭೇದಭಾವ ಇರಬಾರದು ಎಂದು ಹೇಳಿ ಈ ವರ್ತನೆ ತೋರಿದ್ದಾರೆ.
ದಲಿತ ಸಮುದಾಯದ ನಾಗರಾಜ ಸ್ವಾಮೀಜಿಯನ್ನು ಕರೆಸಿ ಜಮೀರ್ ಕೈತುತ್ತು ತಿನ್ನಿಸಿದರು. ನಂತರ ಸ್ವಾಮೀಜಿ ಕೈ ತುತ್ತು ತಿನ್ನಿಸಲು ಮುಂದಾದಾಗ ಕೈ ತುತ್ತು ಬೇಡ, ನಿಮ್ಮ ಬಾಯಿಯಲ್ಲಿರುವ ಅನ್ನವನ್ನೇ ಕೊಡಿ ಎಂದು ಅವರ ಬಾಯಿಯಿಂದ ಎಂಜಲು ಅನ್ನ ತೆಗೆಸಿ ಬಹಿರಂಗವಾಗಿ ಎಂಜಲು ಅನ್ನ ತಿಂದರು.
ನನ್ನ ದೇಹದ ಖಾಸಗಿ ಭಾಗದಲ್ಲಿನ ಮಚ್ಚೆ ಬಗ್ಗೆ ಹೇಳಲಿ: ಲೈಂಗಿಕ ಕಿರುಕುಳ ಆರೋಪಕ್ಕೆ ಎಲಾನ್ ಮಸ್ಕ್ ಓಪನ್ ಚಾಲೆಂಜ್
ಕುತುಬ್ ಮಿನಾರ್ ಸಂಕೀರ್ಣ ಉತ್ಖನನ: ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದ ಕೇಂದ್ರ ಸಚಿವ