newsics.com
ಹಾವೇರಿ/ತುಮಕೂರು/ಶಿವಮೊಗ್ಗ: ಇಂದು(ಮೇ 31) ಬೆಳ್ಳಂಬೆಳಗ್ಗೆ ಹಾವೇರಿ, ತುಮಕೂರು ಹಾಗೂ ಶಿವಮೊಗ್ಗದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದಲ್ಲಿರುವ ನಿರ್ಮಿತಿ ಕೇಂದ್ರದ ಇಂಜಿನಿಯರ್ ಮನೆ ಮತ್ತು ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿ ದಾಖಲೆಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ.
ವಾಗೀಶ ಶೆಟ್ಟರ್ ಎಂಬ ಇಂಜಿನಿಯರ್ ಮನೆ ಮತ್ತು ಕಚೇರಿಯ ಮೇಲೆ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ. ರಾಣೇಬೆನ್ನೂರು ನಗರದ ವಾಗೀಶ ಶೆಟ್ಟರ್ ನಿವಾಸದ ಮೇಲೆ ದಾಳಿ ನಡೆಸಲಾಗಿದೆ.
ಇನ್ನು ತುಮಕೂರಿನಲ್ಲೂ ಕೂಡ ಲೋಕಾಯುಕ್ತ ದಾಳಿ ನಡೆಸಿದ್ದಾರೆ. ಕೆ.ಐ.ಎ.ಡಿ.ಬಿ ಅಧಿಕಾರಿ ನರಸಿಂಹಮೂರ್ತಿ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ.
ಶಿವಮೊಗ್ಗದಲ್ಲಿ ಭ್ರಷ್ಟರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತುಂಗಾ ಮೇಲ್ದಂಡೆ ಸೂಪರ್ ಡಿಟೆಂಡೆಂಟ್ ಇಂಜಿನಿಯರ್ ಪ್ರಶಾಂತ್‌ಗೆ ಸೇರಿದ ಐದು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ರೈಡ್ ಮಾಡಿದ್ದಾರೆ.
ಚಿತ್ರದುರ್ಗ ಲೋಕಾಯುಕ್ತ ಎಸ್‌ಪಿ ವಾಸುದೇವ್ ಹಾಗೂ ಶಿವಮೊಗ್ಗ ಲೋಕ ಡಿವೈಎಸ್ಪಿ ಉಮೇಶ್ ಈಶ್ವರ ನಾಯಕ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಪ್ರಶಾಂತ್‌ಗೆ ಸೇರಿದ ಶಿವಮೊಗ್ಗದ ಎರಡು ಮನೆಗಳು ಭದ್ರಾವತಿಯ ಫಾರ್ಮ್ ಹೌಸ್ ಹಾಗೂ ಕಚೇರಿಗಳಲ್ಲಿ ಲೋಕಾಯುಕ್ತರಿಂದ ಪರಿಶೀಲನೆ ನಡೆಸಲಾಗುತ್ತಿದೆ.
ಜೂನ್ 4 ರವರೆಗೆ ರಾಜಧಾನಿಯಲ್ಲಿ ಭಾರಿ ಮಳೆ: 8 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್