Tuesday, March 2, 2021

ಮಧ್ಯಪ್ರದೇಶದಲ್ಲಿ ಲವ್ ಜಿಹಾದ್ ನಿಷೇಧ ಕಾನೂನಿಗೆ ಅನುಮೋದನೆ

NEWSICS.COM

ಮಧ್ಯಪ್ರದೇಶ: ಮಧ್ಯಪ್ರದೇಶ ಸಚಿವ ಸಂಪುಟ ಸಭೆ ಲವ್ ಜಿಹಾದ್’ಗೆ ನಿಷೇಧ ಹೇರುವ ಧಾರ್ಮಿಕ ಸ್ವಾತಂತ್ರ್ಯ ಮಸೂದೆ2020 ಕ್ಕೆ ಅನುಮೋದನೆ ನೀಡಿದೆ. ಮಸೂದೆಯ ಸೆಕ್ಷನ್ 3ರ ಪ್ರಕಾರ ಬಲವಂತವಾಗಿ ಧಾರ್ಮಿಕ ಮತಾಂತರಕ್ಕೆ ‌ಯತ್ನಿಸಿದರೆ 1-5ವರ್ಷಗಳ ಜೈಲು ಮತ್ತು 25 ಸಾವಿರ ದಂಡ ವಿಧಿಸಬಹುದಾಗಿದೆ. ಒಂದು ವೇಳೆ ಧರ್ಮವನ್ನು ಮುಚ್ಚಿಡುವ ಪ್ರಯತ್ನ ಮಾಡಿದರೆ 3-10 ವರ್ಷ ಕಾರಾಗೃಹ ಮತ್ತು ಕನಿಷ್ಠ 50ಸಾವಿರ ದಂಡ ಎಂದು ಆದೇಶ ಹೊರಡಿಸಿದೆ.

ಅಷ್ಟೇ ಅಲ್ಲದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಪ್ರಾಪ್ತ ಅಥವಾ ಮಹಿಳೆಯನ್ನು ಬಲವಂತವಾಗಿ ಮತಾಂತರಕ್ಕೆ ಪ್ರಯತ್ನಿಸಿದರೆ, ರಕ್ತಸಂಬಂಧಿಗಳು ದೂರು ಸಲ್ಲಿಸಬಹುದು. ಅದರೊಂದಿಗೆ 2-10ವರ್ಷ ಜೈಲು ಸಜೆ ಹಾಗೂ 50ಸಾವಿರ ದಂಡ ಎಂದು ಮಸೂದೆ ಹೇಳಿದೆ.
ಇಬ್ಬರು ಅಥವಾ ಹೆಚ್ಚು ಮಂದಿ ಸೇರಿ ಸಾಮೂಹಿಕ ಧಾರ್ಮಿಕ ಮತಾಂತರಕ್ಕೆ ಯತ್ನಿಸಿದರೆ, 5-10ವರ್ಷ ಶಿಕ್ಷೆ, ಕನಿಷ್ಠ 1 ಲಕ್ಷ ದಂಡ ವಿಧಿಸಲು ಮಸೂದೆ ಅವಕಾಶ ನೀಡಿದೆ.
ಈ ಮೂಲಕ ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸಭೆಯಲ್ಲಿ ಲವ್ ಜಿಹಾದ್ ಕಾನೂನು ಜಾರಿಗೊಂಡಿದೆ.

ಹೊಸ ವರ್ಷಾಚರಣೆಗೆ ಬ್ರೇಕ್; ಕಠಿಣ ನಿಯಮ ಜಾರಿಗೆ ಸರ್ಕಾರ ಚಿಂತನೆ

ಮತ್ತಷ್ಟು ಸುದ್ದಿಗಳು

Latest News

ರಾಜ್ಯಸಭೆ, ಲೋಕಸಭೆ ಟಿವಿ ಇನ್ನು ‘ಸಂಸದ್ ಟಿವಿ’

newsics.com ನವದೆಹಲಿ: ರಾಜ್ಯ ಸಭಾ ಮತ್ತು ಲೋಕ ಸಭಾ ಟಿವಿಯನ್ನು ವಿಲೀನ ಮಾಡಲಾಗಿದ್ದು, ಇನ್ನು 'ಸಂಸದ್ ಟಿವಿ' ಎಂದು ಕರೆಯಲಾಗುತ್ತದೆ. ರಾಜ್ಯ‌ ಸಭೆ ಹಾಗೂ ಲೋಕ ಸಭೆ ಕಲಾಪಗಳನ್ನು...

ಮೈಸೂರಿನ ಸುಧಾ ಹೆಗಡೆಗೆ ಅತ್ಯುತ್ತಮ ಅಭಿನಯ ಪ್ರಶಸ್ತಿ

newsics.com ಮೈಸೂರು: ಮೈಸೂರಿನ ಸುಧಾ ಹೆಗಡೆ ಅವರಿಗೆ ಅತ್ಯುತ್ತಮ ಅಭಿನಯ ಪ್ರಶಸ್ತಿ ದೊರಕಿದೆ. ಬೆಂಗಳೂರಿನಲ್ಲಿ ಆಯೋಜಿಸಿದ್ದ ಬ್ಯುಸಿನೆಸ್ ಬೈ ಬ್ರಾಹ್ಮಿನ್ಸ್ ಪ್ರಾದೇಶಿಕ ಸಮ್ಮೇಳನದಲ್ಲಿ 'ಗೆಲುವಿನೆಡೆಗೆ' ಎಂಬ ನಾಟಕದ ಅಭಿನಯಕ್ಕೆ ಈ ಪ್ರಶಸ್ತಿ ದೊರಕಿದೆ. ನಾಟಕವನ್ನು ಎಂ.ಸಿ ಕೃಷ್ಣಪ್ರಸಾದ್...

150ಕ್ಕೂ ಹೆಚ್ಚು ಸನ್ಯಾಸಿಗಳಿಗೆ ಕೊರೋನಾ: ಕಂಟೈನ್’ಮೆಂಟ್ ವಲಯವಾದ ಧರ್ಮಶಾಲೆ

newsics.com ಹಿಮಾಚಲ‌ಪ್ರದೇಶ: ಹಿಮಾಚಲ ಪ್ರದೇಶದ ಗ್ಯುಟೊ ತಾಂತ್ರಿಕ ಮೊನೆಸ್ಟ್ರಿಯ ಧರ್ಮಶಾಲೆಯ 150ಕ್ಕೂ ಹೆಚ್ಚು ಸನ್ಯಾಸಿಗಳಿಗೆ ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಧರ್ಮಶಾಲೆಯನ್ನು ಕಂಟೈನ್'ಮೆಂಟ್ ಜೋನ್ ಎಂದು ಗುರುತಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿರುವ ಒಬ್ಬ ಸನ್ಯಾಸಿಯನ್ನು...
- Advertisement -
error: Content is protected !!