newsics.com
ಕಿರುತೆರೆ ಇತಿಹಾಸದಲ್ಲಿ ಸಾಕಷ್ಟು ಅಭಿಮಾನಿ ಬಳಗವನ್ನು ಸಂಪಾದಿಸಿರುವ ಟಿ.ಎನ್ ಸೀತಾರಾಮ್ ನಿರ್ದೇಶನದ ಧಾರಾವಾಹಿ ಮಗಳು ಜಾನಕಿ ಕೊರೋನಾ ಕಾರಣದಿಂದಾಗಿ ಅರ್ಧಕ್ಕೆ ಸ್ಥಗಿತಗೊಂಡು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತ್ತು.
ಆದರೆ ಇದೀಗ ಮಗಳು ಜಾನಕಿ ಅಭಿಮಾನಿಗಳಿಗೆ ಟಿ.ಎನ್ ಸೀತಾರಾಮ್ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಮಗಳು ಜಾನಕಿ ಪುನಾರಂಭಗೊಳ್ಳಲಿದೆ. ಈಗಾಗಲೇ ಶೂಟಿಂಗ್ ಆರಂಭವಾಗಿದ್ದು ಸ್ಥಗಿತಗೊಂಡಿದ್ದ ಧಾರಾವಾಹಿಯ ಮುಂದಿನ ಎಪಿಸೋಡ್ಗಳು ಆಗಸ್ಟ್ನಿಂದ ಪ್ರಸಾರವಾಗಲಿವೆ. ಆದರೆ ಮಗಳು ಜಾನಕಿ ಈ ಬಾರಿ ಖಾಸಗಿ ವಾಹಿನಿಯ ಬದಲು ಯುಟ್ಯೂಬ್ನಲ್ಲಿ ಪ್ರಸಾರವಾಗಲಿದೆ.