newsics.com
ಬೆಂಗಳೂರು: ಮಾಸಿಕ ಬಸ್ ಪಾಸ್ ನಿಯಮಗಳನ್ನು ಜುಲೈನಿಂದ ಅನ್ವಯವಾಗುವಂತೆ ಬಿಎಂಟಿಸಿ ಬದಲಾಯಿಸಿದೆ.
ಬಿಎಂಟಿಸಿ 30 ದಿವಸಗಳ ಬಸ್ ಪಾಸ್ ವಿತರಿಸಲಿದ್ದು, ಇದು ಪಾಸ್ ವಿತರಿಸಿದ ದಿನಾಂಕದಿಂದ 30 ದಿನಗಳವರೆಗೆ ಮುಂದುವರೆಯಲಿದೆ. ಈ ಮೊದಲು ಕ್ಯಾಲೆಂಡರ್ ತಿಂಗಳಿಗೆ ಪಾಸ್ ವಿತರಿಸಲಾಗುತ್ತಿತ್ತು. ಆದರೆ ಇನ್ನು ಮುಂದೆ ಬದಲಾಗಲಿದೆ. ಈ ನಿಯಮವು ಬಿಎಂಟಿಸಿ ವಿತರಿಸುವ ಸಾಮಾನ್ಯ, ವಜ್ರ ಮತ್ತು ವಾಯು ವಜ್ರ ಬಸ್ ಗಳ ಮಾಸಿಕ ಪಾಸ್ ಗಳಿಗೆ ಅನ್ವಯವಾಗಲಿದೆ.
ಬಿಎಂಟಿಸಿಯು ಜುಲೈನಿಂದ ಗುರುತಿನ ಚೀಟಿ ನಿಯಮವನ್ನು ಕೂಡ ರದ್ದುಪಡಿಸಲಿದೆ. ಆಧಾರಕಾರ್ಡ್, ಪಾನ್ ಕಾರ್ಡ್ ಸರಕಾರದಿಂದ ವಿತರಿಸಿದ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ತೋರಿಸಬಹುದು.