Thursday, August 18, 2022

ಹೊಸ ರಾಷ್ಟ್ರೀಯ ದಾಖಲೆ ಬರೆದ ಒಲಿಂಪಿಕ್ಸ್ ಚಿನ್ನದ ಹುಡುಗ ನೀರಜ್ ಚೋಪ್ರಾ

Follow Us

newsics.com

ನವದೆಹಲಿ: ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದು ದಾಖಲೆ ಬರೆದಿದ್ದ ಜಾವೆಲಿನ್ ಎಸೆತಗಾರ, ನೀರಜ್ ಚೋಪ್ರಾ ಇದೀಗ ಹೊಸ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ಫಿನ್‌ಲೆಂಡ್ ದೇಶದ ಪಾವೋ ನುರ್ಮಿ ಗೇಮ್ಸ್ ಕೂಟದಲ್ಲಿ 89.30 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಹಿಂದೆ ತಾವೇ ಸ್ಥಾಪಿಸಿದ್ದ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ. ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ನೀರಜ್ 88.07 ಮೀಟರ್ ದೂರಕ್ಕೆ ಎಸೆದು ದಾಖಲೆ ಬರೆದಿದ್ದರು.

ಫಿನ್ಲೆಂಡ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ ನೀರಜ್ ಚೋಪ್ರಾ ರಾಷ್ಟ್ರೀಯ ದಾಖಲೆ ಮುರಿದರೂ ಚಿನ್ನದ ಪದಕ ಗೆಲ್ಲಲಾಗಲಿಲ್ಲ. ತಮ್ಮ ಈ ಸಾಧನೆಗೆ ಅವರು ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. ಈ ಕ್ರೀಡಾಕೂಟದಲ್ಲಿ ಫಿನ್ಲೆಂಡ್ ದೇಶದ ಸ್ಥಳೀಯ ಜಾವೆಲಿನ್ ಪಟು ಓಲಿವರ್ ಹೆಲಂದರ್ 89.83 ಮೀ ದೂರಕ್ಕೆ ಜಾವಲಿನ್ ಎಸೆದು ಮೊದಲ ಸ್ಥಾನ ಪಡೆದರು.

ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾಗೆ 48 ರನ್‌ಗಳ ಭರ್ಜರಿ ಜಯ

ಮತ್ತಷ್ಟು ಸುದ್ದಿಗಳು

vertical

Latest News

ಪ್ರಧಾನಿ ರಕ್ಷಣೆಯ ಹೊಣೆ ಹೊತ್ತಿರುವ ಎಸ್ ಪಿ ಜಿ ಗೆ ಮುಧೋಳದ ಶ್ವಾನ ಸೇರ್ಪಡೆ

newsics.com ನವದೆಹಲಿ: ರಾಜ್ಯದ ಮುಧೋಳ ಶ್ವಾನ ಇದೀಗ ಪ್ರಧಾನಿ ಸೇರಿದಂತೆ ಗಣ್ಯರಿಗೆ ರಕ್ಷಣೆ ನೀಡುವ ವಿಶೇಷ ಭದ್ರತಾಪಡೆ ( ಎಸ್ ಪಿ ಜಿ) ಗೆ ಸೇರ್ಪಡೆಗೊಂಡಿದೆ. ಮುಧೋಳ ಶ್ವಾನ...

ಚಿನ್ನದ ದರದಲ್ಲಿ ಇಳಿಕೆ, ಬೆಳ್ಳಿ ದರ 200 ರೂಪಾಯಿ ಕಡಿಮೆ

newsics.com ಮುಂಬೈ: ಕಳೆದ ಎರಡು ದಿನಗಳಿಂದ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆ ಕಂಡು ಬಂದಿದೆ. ಚಿನ್ನದ ದರ 110 ರೂಪಾಯಿ ಕಡಿಮೆಯಾಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,000 ರೂಪಾಯಿಗಳಿಂದ 47,900...

ಕೊಲೆಯಾದ ಸ್ಥಿತಿಯಲ್ಲಿ ಸಾಧುವಿನ ಮೃತದೇಹ ಪತ್ತೆ

newsics.com ಜೈಪುರ:  ರಾಜಸ್ತಾನದಲ್ಲಿ ಮತ್ತೊಂದು ಸಾಧು ನಿಗೂಢವಾಗಿ ಮೃತಪಟ್ಟಿದ್ದಾರೆ. ಕೊಲೆಯಾದ  ಸ್ಥಿತಿಯಲ್ಲಿ ಸಾಧುವಿನ ಮೃತ ದೇಹ ಪತ್ತೆಯಾಗಿದೆ. ಹನುಮಾನ್ ಘಡ್ ನ ಭಾಖ್ರವಾಲಿ ಎಂಬಲ್ಲಿ ಸಾಧು ನಾಗ ಚೇತನ್ ದಾಸ್ ಎಂಬವರ ಮೃತ ದೇಹ...
- Advertisement -
error: Content is protected !!