ಬೆಂಗಳೂರು: ಡ್ರಗ್ ಪೆಡ್ಲರ್‍ಗಳ ವಿರುದ್ಧ ಸಮರ ಸಾರಿರುವ ಸಿಸಿಬಿ ಶನಿವಾರ ಇಬ್ಬರು ನೈಜಿರಿಯನ್ ಡ್ರಗ್ ಪೆಡ್ಲರ್‍ಗಳನ್ನು ವಶಕ್ಕೆ ಪಡೆದಿದೆ.
ನಾನಸೋ ಜೋಚಿನ್ ಹಾಗೂ ತ್ರವೋರಿ ಬೆನ್ ಬಂಧಿತ ಆರೋಪಿಗಳು.
ವೈದ್ಯಕೀಯ ಕಾರಣಕ್ಕೆ 2017 ರಲ್ಲಿ ವೀಸಾ ಪಡೆದು ಬೆಂಗಳೂರಿಗೆ ಬಂದಿದ್ದ ಆರೋಪಿಗಳು ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದು, ನಗರದ ಹಲವು ದೊಡ್ಡ ದೊಡ್ಡ ಪಾರ್ಟಿಗಳಿಗೆ ಡ್ರಗ್ಸ್ ಪೊರೈಕೆ ಮಾಡುತ್ತಿದ್ದರು ಎನ್ನಲಾಗಿದೆ.
ರಾಮಮೂರ್ತಿನಗರದಲ್ಲಿ ಡ್ರಗ್ಸ್ ಪೊರೈಸುತ್ತಿದ್ದ ವೇಳೆ ದಾಳಿ ನಡೆಸಿದ ಸಿಸಿಬಿ ಇಬ್ಬರನ್ನು ವಶಕ್ಕೆ ಪಡೆದಿದೆ. ಬಂಧಿತರಿಂದ 10 ಲಕ್ಷ ಮೌಲ್ಯದ ಎಲ್‍ಎಸ್‍ಡಿ ಸ್ಡ್ರಿಪ್ಸ್ ಹಾಗೂ 134 ಎಂಡಿಎಂಎ ಮಾತ್ರೆ ವಶಪಡಿಸಿಕೊಳ್ಳಲಾಗಿದೆ.
ನೈಜಿರಿಯನ್ ಡ್ರಗ್ ಪೆಡ್ಲರ್ ಗಳು ಸಿಸಿಬಿ ವಶಕ್ಕೆ
Follow Us