ನವದೆಹಲಿ: ರಕ್ಷಾಬಂಧನಕ್ಕೆ ಎರಡು ದಿನ ಇರುವಾಗಲೇ ಪ್ರಧಾನಿ ನರೇಂದ್ರ ಮೋದಿಯವರಿಗೆ ಪಾಕ್ ಮೂಲದ ಸಹೋದರಿ ಖಮರ್ ಮೊಹ್ಸಿನ್ ಅವರಿಂದ ರಾಖಿ ತಲುಪಿದ್ದು, ಪ್ರಧಾನಿಯವರು ಅವಕಾಶ ನೀಡಿದರೆ ನಾನು ಖುದ್ದಾಗಿ ಅವರಿಗೆ ರಾಖಿ ಕಟ್ಟಲು ಸಿದ್ಧ ಎಂದು ಖಮರ ಮೊಹ್ಸಿನ್ ಹೇಳಿದ್ದಾರೆ.
ಪಾಕ್ ಮೂಲದ ಖಮರ್ ಮೊಹ್ಸಿನ್ ಗುಜರಾತಿನ ಬಟ್ಟೆ ವ್ಯಾಪಾರಿಯನ್ನು ಮದುವೆಯಾಗಿ ಗುಜರಾತ್ ನಲ್ಲಿ ನೆಲೆಸಿದ್ದಾರೆ. ಅವರು ಕಳೆದ ೨೫ ವರ್ಷಗಳಿಂದ ಪ್ರಧಾನಿ ನರೇಂದ್ರಮೋದಿಯವರಿಗೆ ರಾಖಿ ಕಟ್ಟುತ್ತಿದ್ದಾರಂತೆ. ಸುದ್ದಿಮಾಧ್ಯಮಗಳ ಜೊತೆ ಮಾತನಾಡಿದ ಖಮರ್ ನಾನು ಅವರನ್ನು ಮೊದಲ ಬಾರಿಗೆ ದೆಹಲಿಯಲ್ಲಿ ಭೇಟಿ ಮಾಡಿದೆ. ನಾನು ಕರಾಚಿ ಮೂಲದ ಮಹಿಳೆ ಈಗ ಮದುವೆಯಾಗಿ ಗುಜರಾತಿನ ಅಹಮದಾಬಾದಿನಲ್ಲಿ ನೆಲೆಸಿದ್ದೇನೆ ಎಂದು ಪರಿಚಯಮಾಡಿಕೊಂಡೆ. ತಕ್ಷಣವೇ ಮೋದಿಯವರು ನನ್ನನ್ನು ಬೆಹೆನ್ ಎಂದು ಕರೆದರು. ನನಗೆ ಸ್ವಂತ ಸಹೋದರ ಇಲ್ಲ. ಹೀಗಾಗಿ ಪ್ರತಿವರ್ಷ ವೂ ಮೋದಿಯವರಿಗೆ ರಾಖಿ ಕಟ್ಟುತ್ತಿದ್ದೇನೆ. ಕೊವೀಡ್-19 ನಿಂದಾಗಿ ಈ ಭಾರಿ ದೆಹಲಿಗೆ ತೆರಳಿ ರಾಖಿ ಕಟ್ಟಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಾಖಿ ಕಳುಹಿಸಿದ್ದೇನೆ ಎಂದಿದ್ದಾರೆ.
ಅಲ್ಲದೆ ನಾನು ಈ ಹಿಂದೆ ರಾಖಿ ಹಬ್ಬದಂದು ಮೋದಿ ಮುಖ್ಯಮಂತ್ರಿ, ಪ್ರಧಾನಿಯಾಗಬೇಕೆಂದು ಪ್ರಾರ್ಥಿಸಿದ್ದೆ. ಅದರಂತೆ ಅವರು ಸಿಎಂ, ಪ್ರಧಾನಿ ಎಲ್ಲ ಆಗಿದ್ದಾರೆ. ಕೊನೆಯವರೆಗೂ ನಾನು ಅವರ ಸಹೋದರಿಯಾಗಿ ಇರಲು ಬಯಸುತ್ತೇನೆ ಎಂದಿದ್ದಾರೆ.
ಈಗಾಗಲೇ ಖಮರ್ ಕಳುಹಿಸಿರುವ ರಾಖಿ ಪ್ರಧಾನಿ ನಿವಾಸ ಸೇರಿದೆ.
ಪ್ರಧಾನಿಗೆ ಪಾಕ್’ನಿಂದ ಬಂತು ರಾಖಿ..!
Follow Us