ನವದೆಹಲಿ: ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡ ಬಳಿಕವೂ 30ಕ್ಕೂ ಹೆಚ್ಚು ಸಂಸದರು ಕೊರೋನಾ ಸೋಂಕಿಗೆ ತುತ್ತಾದ ಹಿನ್ನೆಲೆಯಲ್ಲಿ ಸಂಸತ್ತಿನ ಅಧಿವೇಶನ ಅವಧಿಗೂ ಮುನ್ನವೇ ಮೊಟಕುಗೊಳ್ಳಲಿದೆ. ಅಂದಾಜು 6 ತಿಂಗಳ ಬಳಿಕ ಆರಂಭವಾದ ಸಂಸತ್ತಿನ ಅಧಿವೇಶನ ಸೆಪ್ಟೆಂಬರ್ 14 ರಿಂದ ಅಕ್ಟೋಬರ್ 1 ರವರೆಗೆ ನಡೆಯಬೇಕಿತ್ತು. ಆದರೆ ಸಂಸದರು ಕೊರೋನಾ ಸೋಂಕಿಗೆ ತುತ್ತಾಗಿತ್ತಿರುವ ಪ್ರಮಾಣ ಗಮನಿಸಿ ಸಂಸತ್ತಿನ ಅವಧಿಯನ್ನು ಕಡಿತಗೊಳಿಸಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ಸಂಸತ್ತಿನ ಹಿರಿಯ ಅಧಿಕಾರಿಗಳು ಈ ಮುನ್ಸೂಚನೆ ನೀಡಿದ್ದು, ಒಂದು ವಾರದ ಸಂಸತ್ತಿನ ಅಧಿವೇಶನ ಅವಧಿ ಕಡಿತಗೊಳ್ಳಲಿದೆ. ಪ್ರತಿನಿತ್ಯ ಅಧಿವೇಶನಕ್ಕೆ ಹಾಜರಾಗುವ ಪತ್ರಕರ್ತರನ್ನು ಕೊರೋನಾ ಸೋಂಕು ಪರೀಕ್ಷೆಗೆ ಒಳಪಡಿಸಿದ ಬಳಿಕವೇ ಬಿಡಲಾಗುತ್ತಿದೆ. ನಿತಿನ್ ಗಡ್ಕರಿ ಸೇರಿದಂತೆ ಹಲವು ಕೇಂದ್ರ ಸಚಿವರು ಕೊರೋನಾ ಸೋಂಕಿಗೆ ತುತ್ತಾಗಿದ್ದು, ಪ್ರತಿನಿತ್ಯ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಅಧಿವೇಶನವನ್ನು ಮುಂದೂಡುವಂತೆ ಡಿಎಂಕೆ,ಎನ್‍ಸಿಪಿ,ತೃಣಮೂಲ ಕಾಂಗ್ರೆಸ್ ಪಕ್ಷಗಳು ಒತ್ತಾಯಿಸಿವೆ. ಹೀಗಾಗಿ ಸಧ್ಯದಲ್ಲೇ ಸಂಸತ್ತಿನ ಅಧಿವೇಶನ ಮುಂದೂಡಿಕೆ ಘೋಷಣೆಯಾಗುವ ಸಾಧ್ಯತೆ ಇದೆ.
ಕಳೆದ 24 ಗಂಟೆಯಲ್ಲಿ ದೇಶದಲ್ಲಿ 93337 ಕೋವಿಡ್-19 ಸೋಂಕು ಪ್ರಕರಣಗಳು ದಾಖಲಾಗಿದ್ದು, ದೇಶದ ಒಟ್ಟು ಸೋಂಕಿತರ ಸಂಖ್ಯೆ,5.3 ಮಿಲಿಯನ್ ದಾಟಿದೆ.
ಅವಧಿಗೂ ಮುನ್ನವೇ ಮೊಟಕುಗೊಳ್ಳಲಿದೆ ಸಂಸತ್ ಅಧಿವೇಶನ
Follow Us