Saturday, October 16, 2021

ಪ್ರಧಾನಿ ಮೋದಿಯಿಂದ 65 ಗಂಟೆಗಳಲ್ಲಿ 24 ಮೀಟಿಂಗ್‌

Follow Us

newsics.com

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 65 ಗಂಟೆಗಳಲ್ಲಿ 24 ಮೀಟಿಂಗ್‌ ನಡೆಸಿ ಮತ್ತೊಮ್ಮೆ ತಮ್ಮ ಅವಿರತ ಕೆಲಸ ಹಾಗೂ ಉತ್ತಮ ಕಾರ್ಯಶೈಲಿಯನ್ನು ಸಾಧಿಸಿದ್ದಾರೆ.

ಸೆಪ್ಟೆಂಬರ್ 22ರಂದು ವಿಶೇಷ ವಿಮಾನದಲ್ಲಿ ಅವರು ಅಧಿಕಾರಿಗಳು ಹಾಗೂ ವಿದೇಶಾಂಗ ಸಚಿವರ ಜತೆಗೆ ಎರಡು ಪೂರ್ವ ತಯಾರಿ ಸಭೆಗಳು ಹಾಗೂ ವಾಷಿಂಗ್ಟನ್‌ ತಲುಪಿದ ಬಳಿಕ ಹೋಟೆಲ್‌ನಲ್ಲಿ ಮೂರು ಸಭೆಗಳನ್ನು ನಡೆಸಿದ್ದರು.

ಸೆಪ್ಟೆಂಬರ್ 23ರಂದು ಹಲವು ಕಂಪೆನಿಗಳ ಸಿಇಒಗಳ ಜತೆಗೆ ಹಾಗೂ ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಜೊತೆ ಸಭೆ ನಡೆಸಿದ್ದರು. ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ಮತ್ತು ಜಪಾನ್‌ ಪ್ರಧಾನಿ ಯೊಶಿಹಿಡೆ ಸುಗಾ ಅವರೊಂದಿಗೆ ದ್ವಿಪಕ್ಷೀಯ ಸಭೆಗಳಲ್ಲಿ ಭಾಗಿಯಾಗಿದ್ದರು. ಬಳಿಕ ಮತ್ತೊಮ್ಮೆ ತಮ್ಮ ನಿಯೋಗದ ಜತೆ ಮೂರು ಆಂತರಿಕ ಸಭೆಗಳನ್ನು ನಡೆಸಿದ್ದರು. ಅಮೆರಿಕಾ ಅಧ್ಯಕ್ಷ ಜೋ ಬೈಡೆನ್‌ ಜತೆಗೆ ಶ್ವೇತಭವನದಲ್ಲಿ ಮಹತ್ವದ ಚರ್ಚೆ ಹಾಗೂ ಕ್ವಾಡ್‌ ಶೃಂಗದ ಮಾತುಕತೆಯಲ್ಲಿ ಭಾಗಿಯಾಗಿದ್ದರು.

ಸೆಪ್ಟೆಂಬರ್ 25ರಂದು ಅಮೆರಿಕಾದಿಂದ ವಾಪಸಾಗುವಾಗ ಪ್ರವಾಸದ ಒಟ್ಟಾರೆ ಫಲಿತಾಂಶ ಮತ್ತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅವರು ನಿಯೋಗದ ಅಧಿಕಾರಿಗಳಿಗೆ ಸೂಚನೆ ನೀಡುವ ಸಭೆ ನಡೆಸಿದ್ದರು.

ಮತ್ತಷ್ಟು ಸುದ್ದಿಗಳು

Latest News

ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಇಬ್ಬರು‌ ನಾಗರಿಕರು ಸಾವು

newsics.com ಜಮ್ಮು ಮತ್ತು ಕಾಶ್ಮೀರ: ಉಗ್ರರ ದಾಳಿಗೆ ಇಬ್ಬರು‌ ನಾಗರಿಕರು ಮೃತಪಟ್ಟಿದ್ದಾರೆ. ಬಿಹಾರ ಮೂಲದ ಬೀದಿ ಬದಿ ವ್ಯಾಪಾರಿ ಮತ್ತು ಉತ್ತರ ಪ್ರದೇಶದ ಕಾರ್ಮಿಕ‌ ಇಂದು ಜಮ್ಮು...

3 ದಿನ ಉಚಿತ ಪೆಟ್ರೋಲ್ ನೀಡಿದ ಬಂಕ್ ಮಾಲೀಕ

newsics.com ಮಧ್ಯ ಪ್ರದೇಶ: ಇಲ್ಲಿನ ಬೆತುಲ್ ಜಿಲ್ಲೆಯಲ್ಲಿರುವ ಪೆಟ್ರೋಲ್ ಬಂಕ್ ಮಾಲೀಕ ತನ್ನ ಗ್ರಾಹಕರಿಗೆ 3 ದಿನ ಉಚಿತ ಪೆಟ್ರೋಲ್ ನೀಡಿದ್ದಾರೆ. ದೀಪಲ್ ಸೈನಾನಿ ಎಂಬುವವರು ಹೆಣ್ಣು ಮಗು ಹುಟ್ಟಿದ ಸಂಭ್ರಮದಲ್ಲಿ ಉಚಿತ ಪೆಟ್ರೋಲ್ ನೀಡಿದ್ದಾರೆ....

ರಾಜ್ಯದಲ್ಲಿ ಹೊಸದಾಗಿ 264 ಕೊರೋನಾ ಪ್ರಕರಣ ಪತ್ತೆ, 421 ಮಂದಿ ಗುಣಮುಖ, 6 ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 264 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,83,133ಕ್ಕೆ ಏರಿಕೆಯಾಗಿದೆ. 421 ಮಂದಿ ಗುಣಮುಖರಾಗಿದ್ದು, ಈವರೆಗೆ ಒಟ್ಟು 29,35,659 ಜನ ಚೇತರಿಸಿಕೊಂಡಿದ್ದಾರೆ. 6 ಸೋಂಕಿತರು...
- Advertisement -
error: Content is protected !!