Saturday, June 10, 2023

ತಿಹಾರ್ ಜೈಲಿನಲ್ಲಿ ಕುಸಿದು ಬಿದ್ದ ಸತ್ಯೇಂದ್ರ ಜೈನ್‌: ಐಸಿಯುನಲ್ಲಿ ಚಿಕಿತ್ಸೆ

Follow Us

newsics.com

ನವದೆಹಲಿ: ತಿಹಾರ್ ಜೈಲಿನಲ್ಲಿ ಕುಸಿದು ಬಿದ್ದು ಆಸ್ಪತ್ರೆ ಸೇರಿರುವ ಆಮ್ ಆದ್ಮ ಪಕ್ಷದ ನಾಯಕ ಸತ್ಯೇಂದ್ರ ಜೈನ್ ಅವರನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ. ದೆಹಲಿಯ ಮಾಜಿ ಸಚಿವರೂ ಆಗಿರುವ ಜೈನ್ ಅವರು ಇಂದು (ಗುರುವಾರ) ಬೆಳಗ್ಗೆ ಸ್ನಾನಗೃಹದಲ್ಲಿ ತಲೆ ತಿರುಗಿ ಬಿದ್ದಿದ್ದರು.

ಜೈನ್ ಅವರನ್ನು ಮೊದಲು ದೀನ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಲೋಕ ನಾಯಕ ಜೈ ಪ್ರಕಾಶ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಜೈನ್ ಅವರನ್ನು ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಬಂಧಿಸಿದೆ.

ಜೈನ್ ಈ ಹಿಂದೆಯೂ ಸ್ನಾನಗೃಹದಲ್ಲಿ ಬಿದ್ದಿದ್ದರು. ಅದರ ಪರಿಣಾಮವಾಗಿ ಅವರ ಬೆನ್ನು ಮೂಳೆಗೆ ಗಂಭೀರವಾದ ಗಾಯವಾಗಿತ್ತು ಎಂದು ಎಎಪಿ ಹೇಳಿದೆ.

2ನೇ ಮದುವೆಯಾದ ನಟ ಆಶಿಶ್ ವಿದ್ಯಾರ್ಥಿ

ಜೂನ್‌ನಿಂದ ಬೆಂಗಳೂರಿನಲ್ಲಿ ಉಬರ್ ಇ.ವಿ. ಕ್ಯಾಬ್ ಸೇವೆ ಆರಂಭ

ಮತ್ತಷ್ಟು ಸುದ್ದಿಗಳು

vertical

Latest News

‘ಶಕ್ತಿ’ ಯೋಜನೆಗೆ ನಾಳೆ ಚಾಲನೆ: ನಿರ್ಮಲಾ ಸೀತಾರಾಮನ್‌ಗೆ ಆಹ್ವಾನ

Newsics ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ನಾಳೆ ಚಾಲನೆ ದೊರಕಲಿದೆ.

ಬ್ರಿಟನ್: ಸಂಸದ ಸ್ಥಾನಕ್ಕೆ ಬೋರಿಸ್ ಜಾನ್ಸನ್ ರಾಜೀನಾಮೆ!

Newsics.com ಲಂಡನ್: ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಇದೀಗ ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ...

ಗಡಿಯಲ್ಲಿ ಪಾಕ್ ನಿಗೂಢ ಬಲೂನ್ ಪತ್ತೆ: ಸೇನೆಯಿಂದ ಶೋಧ ಕಾರ್ಯ

Newsics.com ಶ್ರೀನಗರ: ಪಾಕಿಸ್ತಾನದ ಅಂತರಾಷ್ಟ್ರೀಯ ಏರ್‌ಲೈನ್ಸ್ ಲಾಂಛನ ಇರುವ ವಿಮಾನದ ಆಕಾರದ ಅನುಮಾನಾಸ್ಪದ ಬಲೂನ್ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಶನಿವಾರ ಪತ್ತೆಯಾಗಿದೆ.
- Advertisement -
error: Content is protected !!