Newsics
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ನಾಳೆ ಚಾಲನೆ ದೊರಕಲಿದೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಗೆ ಭಾನುವಾರ ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಗ್ರ್ಯಾಂಡ್ ಸ್ಟೇಪ್ಸ್ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಕೇಂದ್ರ ಸಚಿವರಿಗೂ ಆಹ್ವಾನ ನೀಡಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ಜೊತೆಗೆ ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಆಹ್ವಾನಿಸಲಾಗಿದೆ.
11 ಸಿಎಂ ಸಿದ್ದರಾಮಯ್ಯನವರು “ಶಕ್ತಿ ಲೋಗೋ ಅನಾವರಣಗೊಳಿಸುತ್ತಾರೆ. ಬಳಿಕ ಸ್ಮಾರ್ಟ್ ಕಾರ್ಡ್ ಮಾಡೆಲ್ ಅನಾವರಣಗೊಳಿಸಲಾಗುತ್ತೆ. ನಂತರ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಶಕ್ತಿ ಯೋಜನೆ ಕುರಿತು ಭಾಷಣ ಮಾಡುತ್ತಾರೆ.
ಬಿಎಂಟಿಸಿ ಬಸ್ನಲ್ಲಿ ಸಿಎಂ ಪ್ರಯಾಣ:
ವಿಧಾನ ಸೌಧದ ಮುಂಭಾಗ 4 ನಿಗಮದ(BMTC, KSRTC, NWKRTC,KKRTC) ಸಾಮಾನ್ಯ ಬಸ್ ನಿಲ್ಲಿಸಲು ಫ್ಲಾನ್ ಮಾಡಲಾಗಿದೆ. ಎಲ್ಲ ಬಸ್ ಗಳಲ್ಲೂ ‘0’ ಚಾರ್ಜ್ ಟಿಕೆಟ್ ನೀಡಲು ತಯಾರಿ ನಡೆದಿದೆ. ಎಲ್ಲ ಸಚಿವರು ಅಥವಾ ಶಾಸಕರು ಈ ನಾಲ್ಕು ನಿಗಮದ ಯಾವ ಬಸ್ಗಳಲ್ಲಿ ಬೇಕಿದ್ರು ಪ್ರಯಾಣಿಸಬಹುದು. ಕಾರ್ಯಕ್ರಮದ ಭಾಗವಾಗಿ BS- 6 ಬಿಎಂಟಿಸಿ ಬಸ್ನಲ್ಲಿ ಸಿಎಂ ಸಿದ್ದರಾಮಯ್ಯ ಪ್ರಯಾಣ ಬೆಳೆಸಲಿದ್ದಾರೆ. ಹಾಗೂ ಕಂಡಕ್ಟರ್ ರಿಂದ 0 ಚಾರ್ಜ್ ಟಿಕೆಟ್ ಪಡೆದು ಬಸ್ನಲ್ಲಿರುವ ಮಹಿಳೆಯರಿಗೆ ನೀಡಲಿದ್ದಾರೆ. ಬಿಎಂಟಿಸಿಯ BS- 6 ಬಸ್ ನಲ್ಲಿ ಸಿಎಂ ಸಿಟಿ ರೌಂಡ್ಸ್ ಹೋಗಲಿದ್ದಾರೆ. ವಿಧಾನ ಸೌಧ ಒಂದು ರೌಂಡ್, ಮೆಜೆಸ್ಟಿಕ್ ಅಥವಾ ಮೈಸೂರು ಬ್ಯಾಂಕ್ ಸರ್ಕಲ್ ವರೆಗೆ ಬಿಎಂಟಿಸಿಯಲ್ಲಿ ಒಂದು ರೌಂಡ್ ಹೋಗಲಿದ್ದಾರೆ.
ಗ್ಯಾರಂಟಿ ಜಾರಿ ಬೆನ್ನಲ್ಲೇ ಮದ್ಯಪ್ರಿಯರಿಗೆ ಶಾಕ್