newsics.com
ನವದೆಹಲಿ: ನವೆಂಬರ್ ಎರಡನೆ ವಾರದ ತನಕ ಮಳೆ ಎದುರಿಸಿದ್ದ ದೇಶದ ಹಲವು ನಗರಗಳಲ್ಲಿ ಇದೀಗ ತೀವ್ರ ಚಳಿ ಎದುರಾಗಿದೆ. ಬೆಂಗಳೂರಿನಲ್ಲಿ ಇದೀಗ 10 ವರ್ಷದಲ್ಲಿಯೇ ಅತೀ ಹೆಚ್ಚಿನ ಚಳಿಯ ಅನುಭವವಾಗಿದೆ. ತಾಪಮಾನ 13.9 ಡಿಗ್ರಿ ಸೆಲ್ಸಿಯಸ್ ಗೆ ಇಳಿದಿದೆ. ಇದು ಸೋಮವಾರ ದಾಖಲಾದ ತಾಪಮಾನವಾಗಿದೆ
2012 ನವೆಂಬರ್ 21ರಂದು ರಾಜಧಾನಿ ಬೆಂಗಳೂರಿನಲ್ಲಿ ತಾಪಮಾನ 13.3 ಡಿಗ್ರಿ ಸೆಲ್ಸಿಯಸ್ ದಾಖಲಿಸಿತ್ತು. 1967 ನವೆಂಬರ್ 15 ರಂದು ಉದ್ಯಾನಗರಿ ಬೆಂಗಳೂರಿನಲ್ಲಿ ತಾಪಮಾನ 9.6ಕ್ಕೆ ಕುಸಿದಿತ್ತು. ಅಂದು ಬೆಂಗಳೂರು ನಿಜವಾದ ಅರ್ಥದಲ್ಲಿ ಉದ್ಯಾನ ನಗರಿ ಆಗಿತ್ತು.
ನವೆಂಬರ್ 26, 27 ಮತ್ತು 28 ರಂದು ಬೆಂಗಳೂರಿನಲ್ಲಿ ಭಾರೀ ಚಳಿ ಅನುಭವವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ