newsics.com
ಬೆಂಗಳೂರು: ಯಶವಂತಪುರ- ಕಾರವಾರ-ಯಶವಂತಪುರ ರೈಲು ನಾಳೆಯಿಂದ (ಸೆ.19) ಮೆಜೆಸ್ಟಿಕ್ ರೈಲು ನಿಲ್ದಾಣದಿಂದಲೇ ಹೋರಾಡಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ಈವರೆಗೆ ಯಶವಂತಪುರ ರೈಲು ನಿಲ್ದಾಣದಿಂದ ಹೊರಡುತ್ತಿದ್ದ ಈ ರೈಲಿನ ವೇಳಾಪಟ್ಟಿ ಕೂಡ ಈಗ ಬದಲಾಗಿದೆ. ಸೆ.19ರಿಂದ ನೂತನ ವೇಳಾಪಟ್ಟಿ ಜಾರಿಗೆ ಬರಲಿದೆ. ರೈಲು ನಂಬರ್ 06585/06586 ಯಶವಂತಪುರ-ಕಾರವಾರ-ಯಶವಂತಪುರ ವಿಶೇಷ ರೈಲು ಇನ್ನು ಮುಂದೆ ಯಶವಂತಪುರದ ಬದಲು ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ಹೊರಡಲಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ.
ರೈಲು ಪ್ರಯಾಣಿಕರು ಇನ್ನು ಮಂದೆ ಪಾವತಿಸಬೇಕು ಬಳಕೆದಾರರ ಶುಲ್ಕ
ರೈಲು ನಂಬರ್ 06585 ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ 6.20ಕ್ಕೆ ಹೊರಡಲಿದೆ. ಇನ್ನು ಮುಂದೆ ರೈಲು ಕೆಎಸ್‌ಆರ್ ಬೆಂಗಳೂರು-ಕಾರವಾರ ಎಕ್ಸ್‌ಪ್ರೆಸ್ ವಿಶೇಷ ರೈಲು ಎಂಬ ಹೆಸರಿನಲ್ಲಿ ಸಂಚಾರ ನಡೆಸಲಿದೆ. ಸೆ.19ರಿಂದಲೇ ಈ ಬದಲಾವಣೆ ಜಾರಿಗೆ ಬರಲಿದೆ. ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ಹೊರಡುವ ರೈಲು ಯಶವಂತಪುರ, ಚಿಕ್ಕಬಣಾವರ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಾಣಿಯೂರು, ಬಂಟ್ವಾಳ ಮೂಲಕ ಕಾರವಾರಕ್ಕೆ ಸಂಚಾರ ನಡೆಸಲಿದೆ. ರೈಲು ನಂಬರ್ 0686 ಸಂಜೆ 6 ಗಂಟೆಗೆ ಕಾರವಾರದಿಂದ ಹೊರಡಲಿದೆ. ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣವನ್ನು 8 ಗಂಟೆಗೆ ತಲುಪಲಿದೆ. ಇಷ್ಟು ದಿನ ಯಶವಂತಪುರದವರೆಗೆ ಮಾತ್ರ ಈ ರೈಲು ಸಂಚರಿಸುತ್ತಿತ್ತು.
ರಾಜ್ಯದಲ್ಲಿ ಸೆ.21ರಿಂದ ಶಾಲೆ ಮಾತ್ರ ಓಪನ್, ಕ್ಲಾಸ್ ಇರಲ್ಲ
ಪ್ರಧಾನಿ ಮೋದಿ ಮನಗೆದ್ದ ಸುಳ್ಯದ ಯುವಕನ ಬರ್ತ್ ಡೇ ಗಿಫ್ಟ್
ಸಂಜನಾ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ
ಸ್ಯಾಂಡಲ್‍ವುಡ್ ಡ್ರಗ್ಸ್ ಕೇಸ್; ಅಕುಲ್ ಸೇರಿ ಮೂವರಿಗೆ ಸಿಸಿಬಿ ನೋಟಿಸ್
ಗೂಗಲ್ ಪ್ಲೇ ಸ್ಟೋರ್’ನಿಂದ ಪೇಟಿಎಂ ಮಾಯ..!