Newsics. Com
ನವದೆಹಲಿ: ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತ ಮಹಿಳೆಗೆ ಎರಡು ಬೆರಳಿನ ಪರೀಕ್ಷೆ (ಕನ್ಯತ್ವ ) ನಡೆಸುವುದು ಕಂಡು ಬಂದರೆ ಅವರು ದುರ್ನಡತೆಯ ಅಪರಾಧಿಯಾಗುತ್ತಾರೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಸಂತ್ರಸ್ತೆಯ ಲೈಂಗಿಕ ಹಿನ್ನೆಲೆ ಅಥವಾ ಇತಿಹಾಸ ಸಾಕ್ಷ್ಯವು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಲ್ಲ. ಆದರೆ ಇಂದಿಗೂ ಸಹ ಎರಡು ಬೆರಳಿನ ಪರೀಕ್ಷೆ ನಡೆಸಲ್ಪಡುತ್ತಿರುವುದು ವಿಷಾದನೀಯವಾಗಿದೆ. ಈ ಪರೀಕ್ಷೆಯು ಯಾವುದೇ ವೈಜ್ಞಾನಿಕ ಆಧಾರವನ್ನು ಹೊಂದಿಲ್ಲ, ಬದಲಿಗೆ ಅದು ಮಹಿಳೆಯರನ್ನು ಪುನಃ ಬಲಿಪಶುಗೊಳಿಸುತ್ತದೆ ಮತ್ತು ಮರು ಆಘಾತಗೊಳಿಸುತ್ತದೆ ಎಂದು ಕೋರ್ಟ್ ಹೇಳಿದೆ. ಈ ಬಗ್ಗೆ ಇಂದು ನ್ಯಾ.ಡಿ.ವೈ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರ ವಿಭಾಗೀಯ ಪೀಠ ಈ ಮಹತ್ವದ ಆದೇಶ ನೀಡಿದೆ.
ಅಂತಹ ಪರೀಕ್ಷೆಯನ್ನು ನಡೆಸುವ ಯಾವುದೇ ವ್ಯಕ್ತಿಯು ದುರ್ನಡತೆಯ ಅಪರಾಧಿಯಾಗುತ್ತಾನೆ, ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರದಿಂದ ಬದುಕುಳಿದವರನ್ನು ಎರಡು ಬೆರಳಿನ ಪರೀಕ್ಷೆಗೆ ಒಳಪಡಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಕೇಂದ್ರ ಆರೋಗ್ಯ ವ್ಯವಹಾರಗಳ ಸಚಿವಾಲಯಕ್ಕೆ ಕೋರ್ಟ್ ನಿರ್ದೇಶಿಸಿದೆ.
ಜ್ಯೋತಿಷಿ ಮಾತು ನಂಬಿ ಪ್ರಿಯಕರನಿಗೆ ವಿಷ ಕೊಟ್ಟು ಕೊಂದ್ಲು!!