ಟೋಕಿಯೊ: ಜಪಾನ್ ಬಿಲಿಯನೇರ್ ಯುಸಾಕು ಮೇಜಾವಾ ಚಂದ್ರಯಾನಕ್ಕೆ ತೆರಳಲು ಸಂಗಾತಿಯೊಬ್ಬಳನ್ನು ಶೋಧಿಸುತ್ತಿದ್ದಾರೆ.
ಅಬೆಮಾ ಟಿವಿಗೆ ಕಾರ್ಯಕ್ರಮವೊಂದು ತಯಾರಾಗುತ್ತಿದ್ದು, ಅದರಲ್ಲಿ ಚಂದ್ರನ ಯಾತ್ರೆಯೇ ಮುಖ್ಯ ವಿಷಯವಾಗಿದೆ.
‘ನನ್ನನ್ನು ಒಂಟಿತನ ಕಾಡುತ್ತಿದೆ. ಜೀವನದಲ್ಲಿ ಶೂನ್ಯತೆ ಆವರಿಸಿದೆ. ಈಗ ನಾನು ಒಬ್ಬ ಮಹಿಳೆಯನ್ನು ಪ್ರೀತಿಸುವುದು ಅವಶ್ಯ ಎನಿಸುತ್ತಿದೆ’ ಎಂದು ಯುಸಾಕು ಮೇಜಾವಾ ತಮ್ಮ ವೆಬ್ಸೈಟ್ನಲ್ಲಿ ಬರೆದುಕೊಂಡಿದ್ದಾರೆ. 20 ವರ್ಷದ ಯುವತಿಯರು ಜ.17ರೊಳಗೆ ಅರ್ಜಿ ಸಲ್ಲಿಸಬಹುದು. ಮಾರ್ಚ್ ನಲ್ಲಿ ಮೇಜಾವಾ ಅವರು ಯುವತಿಯೊಬ್ಬಳನ್ನು ವರಿಸಲಿದ್ದಾರೆ.
2023ರಲ್ಲಿ ಎಲೋನ್ ಮಸ್ಕ್ ನ ಸ್ಪೇಸ್ ಎಕ್ಸ್ನಿಂದ ಯುಸಾಕು ಮೇಜಾವಾ ಅವರು ಮೊದಲ ಖಾಸಗಿ ಚಂದ್ರಯಾನ ಕೈಗೊಳ್ಳಲಿದ್ದಾರೆ.
ಚಂದ್ರಯಾನಕ್ಕಾಗಿ ಈ ಬಿಲಿಯನೇರ್ ಗೆ ಸಂಗಾತಿ ಬೇಕಂತೆ!
Follow Us