ಮೆಕ್ಸಿಕೊ: ಪಶುಗಳ ಸಂತಾನೋತ್ಪತ್ತಿಗೆ ಬಳಸುವ ಲೈಂಗಿಕ ಉತ್ತೇಜಕ ಔಷಧ ಸೇವಿಸಿದ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಔಷಧ ಸೇವಿಸಿದ ಕೆಲ ಹೊತ್ತಿನಲ್ಲೇ ಆತನ ಜನನಾಂಗ ತೀವ್ರವಾಗಿ ಉದ್ರೇಕಗೊಂಡು ನೋವು ಆರಂಭವಾಗಿದೆ. ಮೆಕ್ಸಿಕೊದ ಗಡಿ ನಗರ ರೇನೋಸಾದ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ.
ವೆರಾಕ್ರಜನ್ ನ ಈ ವ್ಯಕ್ತಿ ಮಹಿಳೆ ಜತೆ ಲೈಂಗಿಕ ಸಂಪರ್ಕ ಹೊಂದಲು ಮುಂದಾದರು. ಈ ವೇಳೆ ಲೈಂಗಿಕ ಉತ್ತೇಜಕ ಖರೀದಿಸಿ ಸೇವಿಸಿದರು. ನಂತರ ಸತತ ಮೂರು ದಿನ ಜನನಾಂಗ ಉದ್ರೇಕಗೊಂಡಿತ್ತು. ನೋವೂ ಹೆಚ್ಚಿ ಅಪಾಯವಾಗುವ ಸಾಧ್ಯತೆ ಇದ್ದುದರಿಂದ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದಾರೆಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.