ಬೆಂಗಳೂರು: ರಾಜ್ಯದಲ್ಲಿ ಏಪ್ರಿಲ್ 5 , 9ಕ್ಕೆ ಗ್ರಾಮಪಂಚಾಯಿತಿಗಳ ಸಾರ್ವತಿಕ ಚುನಾವಣೆ ನಡೆಯಲಿದೆ ಎಂಬ ಒಕ್ಕಣೆ ಇರುವ ಕರ್ನಾಟಕ ರಾಜ್ಯಪತ್ರದ ಪ್ರತಿ ಶನಿವಾರ ಬೆಳಗ್ಗೆಯಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಮಾಧ್ಯಮಗಳಲ್ಲೂ ಇದು ನೈಜ ಸುದ್ದಿ ಎಂಬಂತೆಯೇ ಬಿತ್ತರವಾಗಿತ್ತು. ಮಧ್ಯಾಹ್ನದ ವೇಳೆ ಈ ರಾಜ್ಯಪತ್ರದ ಅಸಲೀಯತ್ತು ಬಹಿರಂಗವಾಗಿತ್ತು.
ಈ ರಾಜ್ಯಪತ್ರ ಸುದ್ದಿ ವ್ಯಾಪಕವಾಗುತ್ತಿರುವುದನ್ನು ಗಮನಿಸಿದ ರಾಜ್ಯ ಚುನಾವಣಾ ಆಯೋಗ, ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿ ಚುನಾವಣಾ ಅಧಿಸೂಚನೆ ನಕಲಿ ಎಂಬುದನ್ನು ಸ್ಪಷ್ಟಪಡಿಸಿತು.
ವೈರಲ್ ಆಯ್ತು ನಕಲಿ ರಾಜ್ಯಪತ್ರ!
Follow Us