ಮುಂಬೈ: ಗಾನಲೋಕದ ದಂತಕತೆ ಲತಾ ಮಂಗೇಶ್ಕರ್ ಹಾಡಿರುವ ‘ವೊಹ್ ಕೌನ್ ಥಿ’ ಸಿನಿಮಾದ ‘ಲಗ್ ಜಾ ಗಾಲೆ’ ಹಾಡನ್ನು ಎರಡು ವರ್ಷದ ಪುಟ್ಟ ಬಾಲಕಿ ಹಾಡಿದ್ದು, ಅಂತರ್ಜಾಲದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ಲಯಬದ್ಧವಾಗಿ, ತಪ್ಪಿಲ್ಲದಂತೆ ಈ ಬಾಲಕಿ ಹಾಡಿದ್ದು, ಅತಿ ಹೆಚ್ಚು ಜನರು ಈ ವಿಡಿಯೋ ಶೇರ್ ಮಾಡಿಕೊಳ್ಳುತ್ತಿದ್ದಾರೆ. ‘ಪ್ರಾಗ್ಯಾಮೇದ 11’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಲಾಗಿತ್ತು. ಆ ವಿಡಿಯೋ ಈಗ ವೈರಲ್ ಆಗುತ್ತಿದೆ. ‘ಲಿಟಲ್ ಲತಾಜೀ’ ಎಂಬ ಕಾಮೆಂಟ್ಗಳು ಕೂಡ ಕೇಳಿಬರುತ್ತಿವೆ.
ವೈರಲ್ ಆಯ್ತು ಪುಟ್ಟ ಪೋರಿಯ ‘ಲಗ್ ಜಾ ಗಾಲೆ’ ಹಾಡು
Follow Us