ಬೆಂಗಳೂರು: ಸೈಕಲ್ ಸವಾರಿ ಮಾಡಿದ ವಿಡಿಯೋವನ್ನು ನಟ ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದು, ಅದು ವೈರಲ್ ಆಗಿದೆ.
ಮುಖಕ್ಕೆ ಮಾಸ್ಕ್ ಹಾಕಿಕೊಂಡು ತಲೆಗೆ ಟೋಪಿ ಧರಿಸಿ ಗುರುತೇ ಸಿಗದಂತೆ ಸೈಕಲ್ ತುಳಿದುಕೊಂಡು ಶೂಟಿಂಗ್ ಗೆ ತೆರಳುವ ವಿಡಿಯೋ ಪ್ರಕಟಿಸಿದ ಕಿಚ್ಚ ಫಿಟ್ ಆಗಿರಿ ಎಂದಿದ್ದಾರೆ.
ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡ ಶೂಟಿಂಗ್ ಗೆ ಹೋಗುವಾಗ ಸೈಕಲ್ ಸವಾರಿ ಮಾಡಿ ಸುದ್ದಿಯಾಗಿದ್ದರು.