Thursday, July 7, 2022

ಸದನಕ್ಕೆ ಹಾಜರಾಗಲು ಓಡಿದ ಕೇಂದ್ರ ಸಚಿವ!

Follow Us

ನವದೆಹಲಿ: ಕೇಂದ್ರ ಸಚಿವರೊಬ್ಬರು ಸಂಸತ್ ಆವರಣದಲ್ಲಿ ವೇಗವಾಗಿ ಓಡಿದ ಪ್ರಸಂಗ ಬುಧವಾರ ನಡೆದಿದೆ. ಕೇಂದ್ರ ರೈಲ್ವೆ ಸಚಿವ ಪೀಯೂಷ್ ಗೋಯಲ್ ಸದನಕ್ಕೆ ಹಾಜರಾಗಲು ತಡವಾದ್ದರಿಂದ ಕಾರಿನಿಂದ ಇಳಿದವರೇ ಓಡಲಾರಂಭಿಸಿದರು. ಸಚಿವರ ಸಮಯಪ್ರಜ್ಞೆಗೆ ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದು, ಮೀಮ್ಸ್ಗಳ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಸಂಸತ್ ನ ಕಾರಿಡಾರ್ ನಲ್ಕಿ ಫೈಲ್ಬಹಿಡಿದು ವೇಗವಾಗಿ ಓಡುತ್ತಿರುವ ಪಿಯೂಷ್ ಗೋಯೆಲ್ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೈಯಲ್ಲಿ ಫೈಲ್ ಹಿಡಿದು ಇದನ್ನು ಕಂಡು ನಟ್ಟಿಗರು ಗೋಯೆಲ್ ಅವರನ್ನು “ಬುಲೆಟ್ ಟ್ರೈನ್”ಗೆ ಹೋಲಿಕೆ ಮಾಡಿ ಮೀಮ್ಸ್ಗಳನ್ನು ಹರಿಬಿಟ್ಟಿದ್ದಾರೆ. ಕಾಲೇಜಿಗೆ ವಿಳಂಬವಾದರೆ ನಾನು ಕೂಡ ಹೀಗೆ ಓಡುವುದು ಎಂದು ನೆಟ್ಟಿಗರೊಬ್ಬರು ತಿಳಿಸಿದ್ದರೆ, ಬುಲೆಟ್​ ಟ್ರೈನ್​ಗಿಂತ ವೇಗವಾಗಿ ಓಡುವ ಕೇಂದ್ರ ಸಚಿವರು ಯಾರೆಂದು ಊಹಿಸಿ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಇದರೊಂದಿಗೆ ಕೇಂದ್ರ ಸಚಿವರ ಕೆಲಸ ಪ್ರಜ್ಞೆಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ಜೈಲಿನಲ್ಲಿ ವಿಸ್ಕಿ, ಸಿಗರೇಟ್​ಗೆ ಪಟ್ಟು ಹಿಡಿದ ಎಡಿಜಿಪಿ ಅಮೃತ್​ ಪೌಲ್​ : ದಂಗಾದ ಅಧಿಕಾರಿಗಳು

newsics.com ಬೆಂಗಳೂರು : ಪಿಎಸ್​ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ಎಡಿಜಿಪಿ ಅಮೃತ್​ ಪಾಲ್​ ಸಿಐಡಿ ಅಧಿಕಾರಿಗಳ ಮುಂದೆ ಇಡುತ್ತಿರುವ ಬೇಡಿಕೆಗಳನ್ನು ಕೇಳಿ ಸ್ವತಃ...

10 ತಿಂಗಳ ಕಂದಮ್ಮನಿಗೆ ರೈಲ್ವೆ ಇಲಾಖೆಯಲ್ಲಿ ನೌಕರಿ..!

newsics.com ಛತ್ತೀಸಗಢ : ಭಾರತೀಯ ರೈಲ್ವೆ ಇಲಾಖೆಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ 10 ತಿಂಗಳ ಮಗುವಿಗೆ ನೌಕರಿ ಸಿಕ್ಕಿದೆ. ಈಕೆ 18 ವರ್ಷ ಪೂರ್ಣಗೊಳ್ಳುತ್ತಿದ್ದಂತೆಯೇ ಕರ್ತವ್ಯಕ್ಕೆ ಹಾಜರಾಗಳಿದ್ದಾಳೆ. ಛತ್ತೀಸಗಢದ ಆಗ್ನೇಯ ಕೇಂದ್ರ ರೈಲ್ವೆಯ...

ಇದು ನೀಲಾಕಾಶವಲ್ಲ, ಹಸಿರಿನಾಗಸ…!

newsics.com ಅಮೆರಿಕ : ಪ್ರಬಲ ಚಂಡಮಾರುತದ ಬಳಿಕ ಅಮೆರಿಕದ ದಕ್ಷಿಣ ಡಕೋಟಾ, ನೆಬ್ರಸ್ಕಾ ಹಾಗೂ ಅಯೋವಾ ರಾಜ್ಯಗಳ ಹಲವು ನಗರಗಳಲ್ಲಿನ ಆಕಾಶವು ಹಸಿರು ಬಣ್ಣಕ್ಕೆ ತಿರುಗಿದೆ. ಅಮೆರಿಕದ ರಾಷ್ಟ್ರೀಯ ಹವಾಮಾನ ಇಲಾಖೆಯು ಚಂಡಮಾರುತವನ್ನು ಡೆರೆಕೊ ಎಂದು...
- Advertisement -
error: Content is protected !!