newsics.com
ಸ್ಯಾಂಡಿಯಾಗೊ: ತನ್ನ ಮಾಲೀಕ ಊಟ ತರುತ್ತಿದ್ದಂತೆ ಈ ನಾಯಿ ಖುಷಿಪಡುವುದನ್ನು ನೋಡಿ. ಸ್ಯಾಂಡಿಯಾಗೊದ ಗೋಲ್ಡನ್ ರಿಟ್ರೀವರ್ ನಾಯಿ ಬೇಕರ್ ಬಾರ್ಲ್ಸ್ ಈಗ ಅಂತರ್ಜಾಲದ ಸೆಲೆಬ್ರಿಟಿಯಾಗಿದೆ. ಊಟ ಸಿಗುತ್ತದೆಂದು ಡಾನ್ಸ್ ಮಾಡುವ ಈ ಅಪರೂಪದ ನಾಯಿಯ ವಿಡಿಯೋ ಟ್ವಿಟರ್ ನಲ್ಲಿ ಗಮನ ಸೆಳೆಯುತ್ತಿದೆ. ವಿಡಿಯೋವನ್ನು ಈಗಾಗಲೇ 10 ಲಕ್ಷ ಜನ ವೀಕ್ಷಿಸಿದ್ದು, 1.43. ಲಕ್ಷ ಜನ ಲೈಕ್ ಮಾಡಿದ್ದಾರೆ. 18 ಸಾವಿರ ಜನ ರೀ ಟ್ವೀಟ್ ಮಾಡಿದ್ದಾರೆ.
ಈ ನಾಯಿಗೆ ಕ್ಯಾರೆಟ್ ತಿನ್ನುವುದು, ಊಟ ಮಾಡುವುದು ಇಷ್ಟವಂತೆ. ಸ್ವಿಮಿಂಗ್ ಫೂಲ್ ನಲ್ಲಿ ಈಜುವುದೆಂದರೆ ಬಲು ಖಷಿ. ಊಟ ಬರುತ್ತಿದ್ದಂತೆ ಯಾವುದೆ ಮ್ಯೂಸಿಕಲ್ ಫಿಲ್ಮ್ ಗೆ ಕಡಿಮೆ ಇಲ್ಲದಂತೆ ಡಾನ್ಸ್ ಮಾಡುತ್ತದೆ. ವಿ ರೇಟ್ ಡಾಗ್ಸ್ ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಅಪ್ ಲೋಡ್ ಆಗಿದ್ದು, ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಊಟ ಬರುತ್ತಿದ್ದಂತೆ ಬೇಕರ್ ಟಾಪ್ ಟೈರ್ ಟಿಪಿ ಟಾಪ್ ಎಂದು ಡಾನ್ಸ್ ಮಾಡುತ್ತದೆ ಎಂದು ಕ್ಯಾಪ್ಶನ್ ಹಾಕಲಾಗಿದೆ.
This is Baker. He dances when it’s dinner time. 14/10 top-tier tippy taps pic.twitter.com/3Cn8t54uPz
— WeRateDogs® (@dog_rates) September 20, 2020